Politics : ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 10 ಕೆ.ಜಿ. ಅಕ್ಕಿ ಕೊಡುತ್ತೇವೆ – ಸಿದ್ದರಾಮಯ್ಯ
ನಾನು ಸಿಎಂ ಆಗಿದ್ದಾಗ ಯಾರು ಕೂಡ ಬೇರೆಯವರ ಮನೆ ಮುಂದೆ ಹೋಗಾಬಾರದು ಎಂದು ಎಲ್ಲರಗೂ 7 kg ಅಕ್ಕಿ ಕೊಟ್ಟಿದ್ದೇನೆ.. ವಸತಿ ಸಚಿವ ಪುಣ್ಯಾತ್ಮ ಬಡವರಿಗೆ ಒಂದೂ ಮನೆ ಕೊಡಲಿಲ್ಲ..
ನಾವು ಅಧಿಕಾರದಲ್ಲಿ ಇದ್ದಿದ್ದರೆ 1 ಲಕ್ಷ ಮನೆಗಳನ್ನು ಬಡವರಿಗೆ ನೀಡ್ತಿದ್ದೆವು.. ಬರೀ ಸುಳ್ಳನ್ನು ಹೇಳುತ್ತಿದ್ದೆ ಬಿಜೆಪಿ ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ಧಾರೆ..
ಅಲ್ಲದೇ ನಮ್ಮ ಸರ್ಕಾರ ಬಡವರಿಗೆ 7 ಕೆ.ಜಿ. ಅಕ್ಕಿ ಕೊಟ್ಟಿದ್ರೆ ಅದನ್ನು ಬಿಜೆಪಿ ಸರ್ಕಾರ 5 ಕೆ.ಜಿ.ಗೆ ಇಳಿಸಿದೆ. ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದಾರೆ..
ಅಲ್ಲದೇ ಬಿಜೆಪಿಯವರು ಯಾವತ್ತು ಬಡವರ ಪರ ಇರಲು ಸಾಧ್ಯವಿಲ್ಲ ಕಾಂಗ್ರೆಸ್ ಮಾತ್ರ ಬಡವರ ಪರ ಇದೆ, ಕೆಲಸ ಮಾಡುತ್ತೆ.. ನಾನು ಬಂದಿಲ್ಲ ಎಂದು ಬೇರೆ ಪಕ್ಷಕ್ಕೆ ಮತ ನೀಡಬೇಡಿ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ.. ಕಾಂಗ್ರೆಸ್ ಗೆ ಮತ ನೀಡಿದ್ರೆ ನನಗೆ ಮತ ನೀಡಿದಂತೆ ಆಗುತ್ತೆ ಎಂದಿದ್ದಾರೆ.








