ವಿಜಯನಗರ : ಹೊಸಪೇಟೆ ಗ್ರಾಮೀಣ ಪೊಲೀಸರ ಕಾರ್ಯಾಚರಣೆ ವೇಳೆ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಾಣೆ ಮಾಡ್ತಿದ್ದ 8 ಜನರನ್ನ ಬಂಧಿಸಲಾಗಿದೆ.
96 ಟನ್ ಕಬ್ಬಿಣದ ಅದಿರು, 3 ಲಾರಿ, 1 ಜೆಸಿಬಿ, ಸ್ಕಾರ್ಪಿಯೋ, ಸ್ವಿಫ್ಟ್ ಡಿಸೈರ್ ಕಾರು ವಶಕ್ಕೆ ಪಡೆಯಲಾಗಿದೆ.
2.88 ಲಕ್ಷ ಮೌಲ್ಯದ ಅದಿರು, 53 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು 55.88 ಲಕ್ಷದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ, ಕಾರಿಗನೂರು ಹಾಗೂ ಕೂಡ್ಲಿಗಿ ಮೂಲದ 8 ಜನರ ಬಂಧನವಾಗಿದೆ.
ಹನುಮಂತಪ್ಪ, ಎಂ ಮಂಜುನಾಥ, ಡಿ. ಅಬ್ದುಲ್ ಸಲೀಂ, ಬಿ. ಹನುಮಂತ, ಸಿ. ರಂಜೀತ್, ಅಜ್ಮತ್ ಉಲ್ಲಾ, ಕೃಷ್ಣ ಹಾಗೂ ಸಿದ್ದಪ್ಪ ಬಂಧಿತ ಆರೋಪಿಗಳಾಗಿದ್ದಾರೆ..








