WTC Points Table | ಲಂಕಾ ವಿರುದ್ಧ ಗೆದ್ದರೂ ಬದಲಾಗದ ಟೀಂ ಇಂಡಿಯಾ ಸ್ಥಾನ
ಐಸಿಸಿ ವಿಶ್ವ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) 2021-2023ರ ಭಾಗವಾಗಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಮೊದಲ ಟೆಸ್ಟ್ ಗೆದ್ದಿದೆ.
ಮೊದಲು ಬ್ಯಾಟ್ಸ್ಮನ್ಗಳು.. ನಂತರ ಬೌಲರ್ಗಳು ವಿಜೃಂಭಿಸಿದ ಕಾರಣ ಪಂದ್ಯ ಮೂರೇ ದಿನಗಳಲ್ಲಿ ಕೊನೆಗೊಂಡಿದೆ.
ಆದ್ರೆ ಇನ್ನಿಂಗ್ಸ್ ಜೊತೆಗೆ 222 ರನ್ಗಳ ಘನ ಜಯ ಸಾಧಿಸಿದ್ದರೂ, ಡಬ್ಲ್ಯುಟಿಸಿ ಪಾಯಿಂಟ್ಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಬದಲಾಗಿಲ್ಲ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಹೀನಾಯ ಸೋಲಿನ ಬಳಿಕ ಮೊದಲ ಬಾರಿಗೆ ಟೆಸ್ಟ್ ಗೆದ್ದರೂ ರೋಹಿತ್ ಸೇನೆ ಐದನೇ ಸ್ಥಾನಕ್ಕೆ ಸೀಮಿತವಾಗಿದೆ.
ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯಲ್ಲಿ ಅಬ್ಬರಿಸಿದ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಪಾಕಿಸ್ತಾನ, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಂತರದ ಮೂರು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ.
2021-23ರ ಋತುವಿನಲ್ಲಿ, ಆಸೀಸ್ ಇದುವರೆಗೆ ಐದು ಟೆಸ್ಟ್ಗಳನ್ನು ಆಡಿದ್ದು, ನಾಲ್ಕರಲ್ಲಿ ಗೆದ್ದು ಒಂದು ಪಂದ್ಯವನ್ನ ಡ್ರಾ ಮಾಡಿಕೊಂಡು 52 ಅಂಕಗಳನ್ನು ಪಡೆದುಕೊಂಡಿದೆ.
ಟೀಂ ಇಂಡಿಯಾದ ಬಗ್ಗೆ ಹೇಳುವುದಾದರೆ, 5 ಪಂದ್ಯಗಳನ್ನು ಗೆದ್ದಿದೆ, 3 ಸೋಲು ಮತ್ತು 2 ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಆ ಮೂಲಕ 65 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. icc-world-test-championship-points-table









