Ravindra Jadeja ನಿಸ್ವಾರ್ಥಿ ಎಂದ ರೋಹಿತ್
ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಮೇಲೆ ನಾಯಕ ರೋಹಿತ್ ಶರ್ಮಾ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಹೈಲೈಟ್ ಆಗಿದ್ದರು. ಡಬಲ್ ಸೆಂಚೂರಿ ಸಿಡಿಸುವ ಅವಕಾಶಗಳಿದ್ದರೂ, ತಂಡಕ್ಕಾಗಿ ನಿಸ್ವಾರ್ಥವಾಗಿ ಯೋಚನೆ ಮಾಡಿದರು ಎಂದು ಜಡೇಜಾ ಅವರನ್ನ ರೋಹಿತ್ ಶರ್ಮಾ ಕೊಂಡಾಡಿದ್ದಾರೆ.
ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ಗೆಲುವಿನಲ್ಲಿ ಜಡ್ಡು ಭಾಯ್ ಪ್ರಮುಖ ಪಾತ್ರ ವಹಿಸಿದ್ದರು. ಮೊದಲು ಬ್ಯಾಟ್ ಮಾಡಿದ ಜಡೇಜಾ 175 ರನ್ (17 ಬೌಂಡರಿ, 3 ಸಿಕ್ಸರ್) ಗಳಿಸಿದರು. ಆ ನಂತರ ಬೌಲಿಂಗ್ ನಲ್ಲಿ 9 ವಿಕೆಟ್ ಪಡೆದು ಲಂಕಾ ಸಂಹಾರ ಮಾಡಿದರು.
ಆದರೆ, ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಈ ವೇಳೆ ಜಡೇಜಾ ದ್ವಿಶತಕಕ್ಕೆ ಕೇವಲ 25 ರನ್‌ಗಳು ಬೇಕಿತ್ತು. ಆಗ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು. ಇದು ಟೀಂ ಇಂಡಿಯಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಸ್ವತಃ ಜಡೇಜಾ ಸ್ಪಷ್ಟನೆ ನೀಡಿದ್ದಾರೆ. ಈ ನಿರ್ಧಾರ ತಮ್ಮದೇ ಎಂದು ಹೇಳಿದ್ದಾರೆ. ಪಂದ್ಯದ ಬಳಿಕ ರೋಹಿತ್ ಶರ್ಮಾ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇನ್ನಿಂಗ್ಸ್ ಡಿಕ್ಲೇರ್ ಮಾಡಬೇಕೋ ಬೇಡವೋ ಎಂಬ ಸಂದೇಹದಲ್ಲಿ ಜಡೇಜಾ ಅವರೇ ಮುಂದೆ ಬಂದು ಡಿಕ್ಲೇರ್ ಮಾಡುವಂತೆ ಕೇಳಿಕೊಂಡರು. ಅವರು ನಿಸ್ವಾರ್ಥಿ ಎಂದು ಬಣ್ಣಿಸಿದ್ದಾರೆ. ravindra-jadeja-rohit sharma team india