ತಮಿಳುನಾಡಿನ ಮಂತ್ರಿಯೊಬ್ಬರ ಮಗಳು ಪ್ರಿಯಕರನೊಂದಿಗೆ ಎಸ್ಕೇಪ್ ಆಗಿ ಕರ್ನಾಟಕ್ಕೆ ಬಂದು ಇಲ್ಲಿಯೇ ವಿವಾಹವಾಗಿದ್ದು , ಇದೀಗ ಭದ್ರತೆಗಾಗಿ ಬೇಡಿಕೊಂಡಿದ್ದಾರೆ.. ತಮಿಳುನಾಡು ಮುಜರಾಯಿ ಇಲಾಖೆಯ ಸಚಿವ ಶೇಖರ್ ಬಾಬು ಮಗಳು ಪ್ರಿಯಕರ ಸತೀಶ್ ಜೊತೆಗೆ ಎಸ್ಕೇಪ್ ಆಗಿ ಕರುನಾಡಿಗೆ ಬಂದು ಬೆಂಗಳೂರಿನಲ್ಲಿದ್ದಾರೆ..
ಕಮಿಷನರ್ ಕಛೇರಿಗೆ ತೆರಳಿದ ಜೋಡಿ , ಜೀವ ಬೆದರಿಕೆ ಇದೆ ರಕ್ಷಣೆ ಕೊಡಿ ಎಂದು ಕೋರಿಕೊಂಡಿದ್ದಾರೆ.. ಹಡಗಲಿ ತಾಲೋಕು,ಹಾಲಸ್ವಾಮಿ ಮಠದಲ್ಲಿ ಈ ಜೋಡಿಗೆ ಮದುವೆ ಮಾಡಿಸಲಾಗಿದೆ.
ತಮಿಳುನಾಡು ಪೊಲೀಸ್ ಮೇಲೆ ನಂಬಿಕೆ ಇಲ್ಲವೆಂದು ಕರ್ನಾಟಕ ಪೊಲೀಸರ ಮೊರೆ ಹೋಗಿದ್ದಾರೆ.. ತಮಿಳುನಾಡಿಗೆ ಹೋದರೆ ನಮ್ಮನ್ನ ಕೊಲೆ ಮಾಡ್ತಾರೆ ಎಂದು ಯುವತಿ ಹೇಳಿಕೊಂಡಿದ್ದಾರೆ.,
ಯೂ ಟ್ಯೂಬ್ ನಲ್ಲಿ ಕನ್ನಡ ಸಂಘಟನೆ ಬಗ್ಗೆ ಸರ್ಚ್ ಮಾಡಿದ್ದೆ. ಆಗ ಭರತ್ ಶೆಟ್ಟಿ, ಮದುಗಿರಿ ಅವರ ಬಗ್ಗೆ ತಿಳಿದು ಅವರನ್ನ ಸಂಪರ್ಕ ಮಾಡಿ ಬಂದಿದ್ದೇನೆ.
ನನ್ನ ತಂದೆ ಸಿಎಂ ಸ್ಟಾಲಿನ್ ರೈಟ್ ಹ್ಯಾಂಡ್ , ತುಂಬಾ ಪವರ್ ಫುಲ್ ,, ತಂದೆ ಶೇಖರ್ ಬಾಬು ಹೇಳಿದ ಹಾಗೆ ಪೊಲೀಸರು ಕೇಳ್ತಾರೆ. ಈಗಾಗಲೆ ಸತೀಶ್ ಕುಮಾರ್ ಮನೆಯವರನ್ನು ಅರೆಸ್ಟ್ ಮಾಡಿದ್ದಾರೆ. ಇಲ್ಲಿ ಕಮಿಷನರ್ ಸಂಜೆ ಬರಲು ಹೇಳಿದ್ದಾರೆ. ನಾನು ಎಂಬಿಬಿಎಸ್ ಮಾಡಿದಿನಿ, ಸತೀಶ್ ಟ್ರಾನ್ಸ್‌ಪೋರ್ಟ್ ಬ್ಯುಸಿನೆಸ್ ಮಾಡ್ತಿದಾನೆ ಎಮದು ಹೇಳಿಕೊಂಡಿರುವ ಯುವತಿ ನಮ್ಮನ್ನು ಬದುಕಲು ಬಿಡಿ ಎಂದು ಗೋಗರೆದಿದ್ದಾರೆ.








