ಬಾಂಗ್ಲಾದೇಶ, ಮೇ 23 : ಕೊರೋನಾ ವೈರಸ್ ಸೋಂಕಿಗೆ ಪರಿಣಾಮಕಾರಿಯಾದ ಲಸಿಕೆ ಪೂರೈಕೆಗೆ ಅನುಮತಿ ಸಿಕ್ಕಿದ್ದು, ಬಾಂಗ್ಲಾದೇಶದ ಔಷಧಿ ತಯಾರಿಕಾ ಕಂಪನಿ ಕೊರೊನಾ ವೈರಸ್ ಚಿಕಿತ್ಸೆಗೆ ಜನೆರಿಕ್ ಲಸಿಕೆಯನ್ನು ಪೂರೈಸುವ ವಿಶ್ವದ ಮೊದಲ ಕಂಪನಿಯಾಗಿದೆ.
ಬಾಂಗ್ಲಾದೇಶದ ಬೆಕ್ಸಿಂಕೋ ಫಾರ್ಮಾಸ್ಯುಟಿಕಲ್ ಲಿಮಿಟೆಡ್ ಎಂಬ ಕಂಪೆನಿ ಕೊರೊನಾ ವೈರಸ್ ಚಿಕಿತ್ಸೆಗಾಗಿ ರೆಮ್‌ಡೆವೈಸರ್ ಲಸಿಕೆ ಪೂರೈಸಲಿದ್ದು, ಅಮೆರಿಕಾದ ಡ್ರಗ್ ನಿಯಂತ್ರಣ ಮಂಡಳಿಯಿಂದ ಇದಕ್ಕೆ ಸಂಬಂಧಿಸಿದಂತೆ ಮಾನ್ಯತೆ ಪಡೆದು ಕೊಂಡಿದೆ.
ಢಾಕಾ ಮೂಲದ ಬೆಕ್ಸಿಂಕೋ ಕಂಪನಿ ಒಂದು ಸೀಸೆ ಗೆ 6000 ಟಾಕಾ ಅಂದರೆ 5300 ರೂಪಾಯಿ ಬೆಲೆಯಲ್ಲಿ ಖಾಸಗಿ ಕ್ಲಿನಿಕ್‌ಗಳಿಗೆ ರೆಮ್‌ಡೆವೈಸರ್ ಲಸಿಕೆಯನ್ನು ಮಾರಾಟ ಮಾಡಲಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ವರದಿಗಳು ಹೇಳಿವೆ. ಈ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಕೊರೊನಾ ವೈರಸ್ ಚಿಕಿತ್ಸೆಗೆ ನೀಡಬಹುದಾಗಿದೆ ಎಂದು ಅಮೆರಿಕಾದ ಡ್ರಗ್ ನಿಯಂತ್ರಣ ಮಂಡಳಿ ಕ್ಲಿನಿಕಲ್ ಟೆಸ್ಟ್ ನಂತರ ಮಾನ್ಯತೆ ನೀಡಿದೆ. ಬಾಂಗ್ಲಾದೇಶ ವಿಶ್ವ ವ್ಯಾಪಾರ ಸಂಸ್ಥೆ ಯಿಂದ ಪೇಟೆಂಟ್ ಉಳ್ಳ ಈ ಡ್ರಗ್‌ನ ಜೆನೆರಿಕ್ ಮಾದರಿಯ ಲಸಿಕೆಯನ್ನು ಪೂರೈಸಲು ಅನುಮತಿ ಪಡೆದುಕೊಂಡಿದೆ.
ಈ ಮೊದಲು ಜಿಲೆಡ್ ಸೈನ್ಸಸ್ ರೆಮ್‌ಡೆವೈಸರ್ ಡ್ರಗ್ ಭಾರತದ ಐದು ಜೆನೆರಿಕ್ ಔಷಧಿ ಉತ್ಪಾದನಾ ಕಂಪನಿಗಳಾದ ಸಿಪ್ಲಾ ಲಿಮಿಟೆಡ್, ಹೆಟೆರೊ ಲ್ಯಾಬ್ಸ್ ಲಿಮಿಟೆಡ್, ಜುಬಿಲೆಂಟ್ ಲೈಫ್ ಸೈನ್ಸ್, ಮೈಲಾನ್ ಮತ್ತು ಫೆರೊಜನ್ಸ್ ಲ್ಯಾಬೋರೆಟರಿಸ್ ಜೊತೆ ಈ ಡ್ರಗ್ ತಯಾರಿಸಲು ಒಪ್ಪಂದ ಮಾಡಿಕೊಂಡಿತ್ತು.








