ಮಾರ್ಜಾಲ ರೂಪದಲ್ಲಿ ಬಂದ ಸಾವು.. Cat bite | ಬೆಕ್ಕು ಕಚ್ಚಿ ಇಬ್ಬರು ಕೊನೆಯುಸಿರು
ಆಂಧ್ರ ಪ್ರದೇಶ : ಬೆಕ್ಕು ಕಚ್ಚಿ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.
64 ವರ್ಷದ ಕಮಲ, 43 ವರ್ಷದ ನಾಗಮಣಿ ಮೃತ ದುರ್ದೈವಿಗಳಾಗಿದ್ದಾರೆ. ಮೃತರು ವೆಮುಲಮಾಡ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
ಕಳೆದ ಎರಡು ತಿಂಗಳ ಹಿಂದೆ ಕಮಲ ಹಾಗೂ ನಾಗಮಣಿ ಅವರಿಗೆ ಬೆಕ್ಕು ಕಚ್ಚಿತ್ತು. ಕೂಡಲೇ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಲಾಗಿತ್ತು.
ಆದ್ರೆ ಈ ತಿಂಗಳ ನಾಲ್ಕನೇ ತಾರೀಕಿನಂದು ಇಬ್ಬರ ಆರೋಗ್ಯದಲ್ಲಿ ಏರುಪೇರಾಗಿದೆ.
ಹೀಗಾಗಿ ಕಮಲಾ ಅವರನ್ನು ಮಂಗಳಗಿರಿಯ ಎನ್‍ಆರ್‍ಐ ಆಸ್ಪತ್ರೆಗೆ ದಾಖಲಿಸಲಾಯಿತು.
ಇತ್ತ ನಾಗಮಣಿ ಅವರನ್ನು ವಿಜಯವಾಡದ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಶನಿವಾರ ಮೃತಪಟ್ಟಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ವೈದ್ಯರು ಬೆಕ್ಕು ಕಚ್ಚಿದ ನಂತರ ಈ ಮಹಿಳೆಯರಿಗೆ ರೇಬಿಸ್ ತಗುಲಿದೆ ಎಂದು ತಿಳಿಸಿದ್ದಾರೆ.
Two women die from rabies after cat bite in Andhra









