Jayant Yadav ಗಾಗಿ ತ್ಯಾಗ.. Jadeja ಸೂಪರ್
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 222 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಪಂದ್ಯದ ನಂತರ, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಜಡೇಜಾ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನ ಬಹಿರಂಗಗೊಳಿಸಿದ್ದಾರೆ .
ಮೊದಲು ಬ್ಯಾಟಿಂಗ್ ನಲ್ಲಿ ಔಟಾಗದೆ 175. ಬಳಿಕ ಬೌಲಿಂಗ್ ನಲ್ಲಿ 9 ವಿಕೆಟ್ ಪಡೆದು ಜಡೇಜಾ ಪಂದ್ಯ ಶ್ರೇಷ್ಠ ಎನಿಸಿಕೊಂಡಿದ್ದಾರೆ.
ಆದರೆ ಜಡೇಜಾ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದು ವಿಷಯವಿದೆ. ನಾಯಕ ರೋಹಿತ್ ಶರ್ಮಾ ಜಯಂತ್ ಯಾದವ್ ಅವರಿಗೆ ಮೂರನೇ ಸ್ಪಿನ್ನರ್ ಆಗಿ ತಂಡದಲ್ಲಿ ಅವಕಾಶ ನೀಡಿದರು. ಆದರೆ ನಮ್ಮಿಬ್ಬರಿಂದಾಗಿ ಜಯಂತ್ ಗೆ ಹೆಚ್ಚು ಬೌಲಿಂಗ್ ಮಾಡಲು ಅವಕಾಶ ಇರಲಿಲ್ಲ.
ಆಗ ಜಡೇಜಾ ತಂಡದಲ್ಲಿ ಮೂರನೇ ಸ್ಪಿನ್ನರ್ ಇದ್ದಾರೆ ಎಂದು ಗುರುತಿಸಲು ಕೆಲವು ಓವರ್ ಗಳನ್ನು ಜಯಂತ್ ಗಾಗಿ ತ್ಯಾಗ ಮಾಡಿದರು.
ನಿಜ ಹೇಳಬೇಕು ಅಂದ್ರೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ಜಡೇಜಾಗೆ ಐದು ವಿಕೆಟ್ ಪಡೆಯುವ ಅವಕಾಶವಿತ್ತು.
ಆದ್ರೆ ಅವರ ಖಾತೆಯ ಓವರ್ ಗಳನ್ನು ಜಯಂತ್ ಗೆ ನೀಡಿದ ಕಾರಣ, ಜಡೇಜಾ ಆ ಅವಕಾಶವನ್ನು ಕಳೆದುಕೊಂಡರು.
ಈ ಬಗ್ಗೆ ಸ್ವತಃ ಜಡೇಜಾ ರೋಹಿತ್ ಜೊತೆ ಮಾತನಾಡಿದ್ದು, ಜಯಂತ್ ಯಾದವ್ ಗೆ ಅವಕಾಶ ನೀಡಿದ್ದಾರೆ.
ನಾನು ಕೂಡ ಜಡೇಜಾ ನಿರ್ಧಾರವನ್ನು ಒಪ್ಪುತ್ತೇನೆ. ಜಡೇಜಾ ಹೇಳಿದ್ದು ನಿಜ.. ನಿಜವಾಗ್ಲೂ ಜಡ್ಡು ಸೂಪರ್ ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
jayant-yadav-ashwin-reveals-jadeja-sacrifice