ನಾನು ಕೀವ್ ನಗರದಲ್ಲಿಯೇ ಇದ್ದೇನೆ ಎಂದು ವಿಡಿಯೋ ಹರಿಬಿಟ್ಟ ಝೆಲೆನ್ಸ್ಕಿ – Saaksha Tv
ಉಕ್ರೇನ್ : ನಾನು ಇನ್ನೂ ಕೀವ್ ನಗರದಲ್ಲಿಯೇ ಇದ್ದೇನೆ, ಅವಿತುಕೊಂಡಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 13ನೇ ದಿನಕ್ಕೆ ಮುಂದುವರೆದಿದ್ದು, ಸೋಮವಾರ ತಡರಾತ್ರಿ ತಮ್ಮ ಇನ್ ಸ್ಟಾಗ್ರಾಮ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ತಮ್ಮ ಕಚೇರಿಯಿಂದ ನಗರವನ್ನು ತೋರಿಸಿದ್ದಾರೆ. ಈ ವೇಳೆ ‘ನಾನು ಕೀವ್‌ನ ಬಂಕೋವಾ ಸ್ಟ್ರೀಟ್‌ನಲ್ಲಿ ಇದ್ದೇನೆ.
https://www.instagram.com/p/Ca0hYyrIlIj/?utm_source=ig_embed&ig_rid=6a6c4013-1e9e-410b-a771-e0e7502944dd
ಅಲ್ಲದೇ ನಾನು ಅಡಗಿಕೊಳ್ಳುವುದಿಲ್ಲ, ಯಾರಿಗೂ ಹೆದರುವುದಿಲ್ಲ. ನಮ್ಮ ಈ ರೀತಿಯ ದೇಶಭಕ್ತಿ ಇದೆ. ಆದಷ್ಟು ಬೇಗ ದೇಶಭಕ್ತಿ ಈ ಯುದ್ಧವನ್ನು ಗೆಲ್ಲುತ್ತದೆ. ಜೊತೆಗೆ ತಾವು ಇರುವ ಸ್ಥಳದ ಲೊಕೇಷನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಡಿದ್ದಾರೆ.
ರಷ್ಯಾ ಉಕ್ರೇನ್ ಯುದ್ಧದ ನಡುವಯೇ ಉಕ್ರೇನ್ ಅಧ್ಯಕ್ಷ ಪೋಲೆಂಡ್‍ಗೆ ಪಲಾಯನ ಮಾಡಿದ್ದಾರೆ ಎನ್ನುವ ಆರೋಪಗಳನ್ನು ಝೆಲೆನ್ಸ್ಕಿ ತಿರಸ್ಕರಿಸಿದ್ದಾರೆ. ರಷ್ಯಾ ಯುದ್ಧ ಆರಂಭಿಸಿದ ನಂತರ ಉಕ್ರೇನಿನ ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಗೆ ಮೂರು ಬಾರಿ ಪ್ರಯತ್ನ ನಡೆಸಲಾಗಿತ್ತು. ಆದರೆ ಉಕ್ರೇನಿನ ಅಧಿಕಾರಿಗಳಿಗೆ ಈ ಬಗ್ಗೆ ಮೊದಲೇ ಮಾಹಿತಿ ಲಭ್ಯವಾಗಿದ್ದ ಹಿನ್ನೆಲೆಯಲ್ಲಿ ಸಂಚು ವಿಫಲಗೊಳ್ಳುವಂತೆ ಮಾಡಿದ್ದರು ಎಂದು ವರದಿಗಳು ತಿಳಿಸಿವೆ.








