Oil price | ಅಡುಗೆ ಎಣ್ಣೆ ದರ ಹಿಗ್ಗಾಮುಗ್ಗಾ ಏರಿಕೆ!
ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ
ಸೂರ್ಯಕಾಂತಿ ಎಣ್ಣೆ ದರ 175 ರೂಗೆ ಏರಿಕೆ
ಮುಂದಿನ ದಿನಗಳಲ್ಲಿ 200 ರೂ ತಲುಪುವ ಸಾಧ್ಯತೆ
ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯ
ಮುಂಬೈ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭಾರತೀಯರ ಅಡುಗೆ ಮನೆಯಲ್ಲಿ ಕಂಪನವನ್ನುಂಟು ಮಾಡಿದೆ.
ರಷ್ಯಾ ಸೇನೆ ಉಕ್ರೇನ್ ದೇಶದ ಮೇಲೆ ದಾಳಿ ನಡೆಸಿದ್ದು, ಅದರ ಪರಿಣಾಮ ಭಾರತ ಆರ್ಥಿಕತೆ ಮೇಲೆಯೂ ಬೀರಲು ಶುರು ಮಾಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಾರಣದಿಂದಾಗಿ ಭಾರತದಲ್ಲಿ ಅಗತ್ಯವಸ್ತುಗಳ ಬೆಲೆ ಮತ್ತೆ ಆಕಾಶ ಮುಟ್ಟುತ್ತಿವೆ.
ಮುಖ್ಯವಾಗಿ ಅಡುಗೆ ತೈಲಗಳ ಬೆಲೆ ಮತ್ತೆ ದಾಖಲೆ ಮಟ್ಟಕ್ಕೆ ಏರಿಕೆ ಆಗುತ್ತಿದೆ.
ದೇಶದಲ್ಲಿ ಕಳೆದ ಒಂದು ವಾರದಲ್ಲಿ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆ ಬೆಲೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ.
ಯುದ್ಧದ ಪರಿಣಾಮ ಪ್ರಸ್ತುತ ಸೂರ್ಯಕಾಂತಿ ಎಣ್ಣೆ ದರ 175 ರೂಪಾಯಿವರೆಗೆ ಏರಿಕೆಯಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಹೀಗೆ ಮುಂದುವರೆದರೇ ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ಬೆಲೆ 200 ರೂಪಾಯಿಯವರೆಗೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಯುದ್ಧದ ಕಾರಣದಿಂದಾಗಿ ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆ ದರ 40 ರೂಪಾಯಿಯಷ್ಟು ಹೇರಿಕೆಯಾಗಿದೆ.
ಯುದ್ಧದ ಹೆಸರಲ್ಲಿ ಕಾಳಸಂತೆಕೋರರು ಅಡುಗೆ ಎಣ್ಣೆ ದಾಸ್ತಾನು ಮಾಡಿಕೊಳ್ಳತೊಡಗಿದ್ದು, ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡತೊಡಗಿದ್ದಾರೆ ಎಂದ ಆರೋಪವೂ ಕೇಳಿಬಂದಿದೆ.









