Andhra pradesh | ವಿಚಿತ್ರ ಆಕಾರದ ಮೊಟ್ಟೆ ಇಟ್ಟ ಕೋಳಿ!
ಆಂಧ್ರ ಪ್ರದೇಶ : ಕೋಳಿಯೊಂದು ವಿಚಿತ್ರ ಆಕಾರದ ಮೊಟ್ಟೆ ಇಟ್ಟಿರುವ ಘಟನೆ ಆಂಧ್ರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಪೂರ್ವ ಗೋದಾವರಿ ಜಿಲ್ಲೆಯ ವಿಆರ್ ಪುರಂ ವಲಯದ ರಾಜುಪೇಟ ಕಾಲೋನಿಯಲ್ಲಿ ಕೋಳಿಯೊಂದು ವಿಚಿತ್ರ ಆಕಾರದ ಮೊಟ್ಟೆ ಇಟ್ಟಿದೆ.
ರಾಜುಪೇಟ ಕಾಲೋನಿಯಲ್ಲಿ ಮಂಜಪು ಸತ್ಯನಾರಾಯಣ ಎಂಬುವರು ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ.
ಭಾನುವಾರ ಸತ್ಯನಾರಾಯಣ ಎಂದಿನಂತೆ ಮೊಟ್ಟೆಗಳನ್ನು ತೆಗೆದುಕೊಳ್ಳಲು ಹೋಗಿದ್ದಾರೆ.
ಈ ವೇಳೆ ಒಂದು ವಿಚಿತ್ರ ಆಕಾರದ ಮೊಟ್ಟೆಯನ್ನು ಸತ್ಯನಾರಾಯಣ ಅವರು ನೋಡಿದ್ದಾರೆ.
ಮೊದಲು ಇದೇನೋ ಮೊಟ್ಟೆಯೋ? ಅಥವಾ ಬೇರೆ ಏನಾದರೂ ಇರಬಹುದಾ ಎಂಬ ಗೊಂದಲಕ್ಕೆ ಸತ್ಯನಾರಾಯಣ ಒಳಗಾಗಿದ್ದರು.
ಆದರೆ, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಮೊಟ್ಟೆ ಎಂಬುದು ಸ್ಪಷ್ಟವಾಗಿದೆ.
ಇನ್ನು ಮೊಟ್ಟೆ ವಿಚಿತ್ರ ಆಕಾರದ ಮೊಟ್ಟೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಳಿಯು ಈ ರೀತಿ ವಿಚಿತ್ರ ಆಕಾರದಲ್ಲಿ ಮೊಟ್ಟೆ ಇಡಲು ಅನುವಂಶಿಕ ದೋಷಗಳು ಎಂದು ಪರಿಣಿತರು ಹೇಳಿದ್ದಾರೆ.
A hen laid a different form of egg at Andhra pradesh









