ಕಿಡ್ನಾಪ್ ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳ ಬಂಧಿಸಿದ ವಿದ್ಯಾರಣ್ಯಪುರ ಪೊಲೀಸರು
ಬೆಂಗಳೂರು : ಪರಿಚಯಸ್ಥ ಮಹಿಳೆಯ ಬಳಿ ಹಣಕ್ಕಾಗಿ ಪೀಡಿಸ್ತಿದ್ದ ವ್ಯಕ್ತಿಯೊಬ್ಬ ಹಣ ನೀಡದೇ ಹೋದಾಗ ಆಕೆಯ ಮಗನನ್ನ ಕಿಡ್ನಾಪ್ ಮಾಡಿದ್ದ ಘಟನೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಇದೀಗ ಆರೋಪಿಯನ್ನ ಪೊಲೀಸರು ಬಂಧಿಸಿದ್ಧಾರೆ.
ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಪ್ರಮುಖ ಆರೋಪಿ ರವಿ( 46), ಮಾದೇಶ(24) ಹಾಗೂ ಶ್ರೀನಿವಾಸ್(20) ಬಂಧಿತ ಆರೋಪಿಗಳಾಗಿದ್ಧಾರೆ.
ರವಿ ಮಹಿಳೆಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ.. ಹಣ ನೀಡದೆ ಇದ್ದಕ್ಕಾಗಿ ಆಕೆಯ ಮಗನನ್ನ ತನ್ನ ಸಹಚರರ ಜೊತೆಗೂಡಿ ಅಪಹರಿಸಿದ್ದ. ಬಳಿಕ 7 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಅಲ್ಲದೇ ಹಣ ನೀಡದೇ ಇದ್ದಲ್ಲಿ ಮಗನನ್ನ ಕೊಲೆ ಮಾಡೊ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ..
ಈ ಬಗ್ಗೆ ಮಹಿಳೆ ನೀಡಿದ ದೂರಿನ ಅನ್ವಯ ವಿದ್ಯಾರಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿದ್ಧಾರೆ. ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನ ಪೊಲೋಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ..









