ಬೆಂಗಳೂರು : ಮೇಕೆದಾಟು ವಿಚಾರದ ಬಗ್ಗೆ ಮುಂದಿನ ವಾರ ಸರ್ವಪಕ್ಷ ಸಭೆ ಕರೆಯುವುದಾಗಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಆದರೆ ಈ ಬಗ್ಗೆ ಮಾಜಿ ಸಿಎಂ , ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚರ್ಚೆ ಮಾಡಿ ತಮಿಳುನಾಡಿನವ್ರು ರಾಜಕೀಯಕ್ಕಾಗಿ ಕೋರ್ಟ್ ಗೆ ಹೋಗಿದ್ದಾರೆ. ಅದರ ಬಗ್ಗೆ ಸುಪ್ರೀಂ ಕೋರ್ಟ್ ಯಾವ ಆದೇಶವೂ ಕೊಟ್ಟಿಲ್ಲ.
ಕೇಂದ್ರ ಸರ್ಕಾರವೇ ಮೇಕೆದಾಟು ಕೋರ್ಟ್ ನಲ್ಲಿದೆ ಅಂತಾರೆ. ಇದನ್ನು ನಾನು ಖಂಡಿಸ್ತೇನೆ. ಇದನ್ನ ಗಜೇಂದ್ರಸಿಂಗ್ ಶೇಖಾವತ್ ಎದುರು ಹೇಳದೇ ಕೇಳಿಸ್ಕೊಂಡು ಬಂದಿದಾರೆ ಸಿಎಂ ಅಂದು ಕಿಡಿಕಾರಿದರು.
ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಸ್ಪಷ್ಟನೆ ನೀಡಿದ್ದು , ಆವತ್ತು ಶೇಖಾವತ್ ಜಲಜೀವನ್ ಮಿಷನ್ ಕಾರ್ಯಕ್ರಮಕ್ಕೆ ಬಂದಿದ್ರು. ನಾನು ಅಲ್ಲಿದ್ದಾಗ ಈ ವಿಷಯ ಪ್ರಸ್ತಾಪ ಆಗಿಲ್ಲ. ಅವ್ರು ಸುದ್ದಿಗೋಷ್ಟಿಯಲ್ಲಿ ಆ ಮಾತು ಹೇಳಿದ್ರು, ನನ್ನ ಸಮ್ಮುಖದಲ್ಲಿ ಅಲ್ಲ ಎಂದರು..
ಅಲ್ಲದೇ ಡಿಪಿಆರ್ ಗೆ ಒಪ್ಪಿಗೆ ತಗೋಬೇಕು. ಪರಿಸರ ಇಲಾಖೆ ಅನುನತಿ ಪಡೆಯಬೇಕು. ಇವೆರಡೂ ಕೆಲಸ ಆದ್ರೆ ಯೋಜನೆ ಶುರು ಮಾಡ್ತೇವೆ. ಇದೇ ವಾರ ಸರ್ವಪಕ್ಷ ಸಭೆ ಕರೀತೇವೆ ಎಂದರು..