ಸಚಿವರು, ಶಾಸಕರ ವಿರುದ್ಧ ಗರಂ ಆದ ಸ್ಪೀಕರ್ – Saaksha Tv
ಬೆಂಗಳೂರು: ವಿಧಾನಸಭೆ ಕಲಾಪ ಆರಂಭವಾಗಿ 4 ದಿನ ಕಳೆದರು ಕೆಲ ಸಚಿವರು ಸಭೆಗೆ ಗೈರಾಗಿದ್ದು, ಸಭಾಪತಿ ವಿಶ್ವೇಶ್ವರ ಹೆಗಡಡೆ ಕಾಗೇರಿ ಸಚಿರವ ವಿರುದ್ಧ ಕಿಡಿಕಾರಿದ್ದಾರೆ.
ಇಂದಿನ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಸಚಿವರು ಸಭೆಗೆ ಗೈರಾಗಿದ್ದರು. ಇದಕ್ಕೆ ಗರಂ ಆದ ಸಭಾಪತಿಗಳು ಪ್ರಶೋತ್ತರ ಮತ್ತು ಇತರ ಸಂದರ್ಭಗಳಲ್ಲಿ ಸದನದಲ್ಲಿ ಸಚಿವರು ಕಡ್ಡಾಯವಾಗಿ ಇರಬೇಕೆಂದು ಇದೆ. ಆದರೆ ನಿನ್ನೆ ಮೊನ್ನೆಯಿಂದ ನಾನು ಗಮನಿಸ್ತಿದೀನಿ ಸದನಕ್ಕೆ ಬಂದರೂ, ಬರದೇ ಹೋದರೂ ಅಡ್ಡಿ ಇಲ್ಲ ಎಂಬ ಭಾವನೆ ಕೆಲವು ಸಚಿವರಲ್ಲಿ ಇದೆ ಇದು ಶೋಭೆ ತರಲ್ಲ ಎಂದು ಗರಂ ಆದರು.
ಈ ಮನಸ್ಥಿತಿ ಸದಸ್ಯರಲ್ಲಿ, ಸಚಿವರಲ್ಲಿ ಬಂದರೆ ಈ ವ್ಯವಸ್ಥೆ ಕುಸಿತ ಕಾಣುತ್ತದೆ. ಸಚಿವರಿಗೆ ಇದಕ್ಕಿಂತ ಇನ್ನಿತರ ಕಾರ್ಯಕ್ರಮ ಮುಖ್ಯವೆನಿಸಿದೆ. ಈ ಭಾವನೆಯಿಂದ ಹೊರಬನ್ನಿ. ಸಚಿವರು ಗೆಸ್ಟ್ ಅಪಿಯರೆನ್ಸ್ ಥರ ಬರ್ತಾರೆ. ಯಾವುದೋ ಒಂದು ಸಂದರ್ಭದಲ್ಲಿ ಸದನಕ್ಕೆ ಬಂದು ಹೋಗುತ್ತಾರೆ ಎಂದು ಸಚಿವರ ಮೇಲೆ ಅಸಮಾಧಾನಗೊಂಡರು.
ಕಲಾಪಕ್ಕೆ ಗೈರಾದ ಶಾಸಕರು
ಬಿಜೆಪಿ – 25, ಕಾಂಗ್ರೆಸ್ – 13 ಮತ್ತು ಜೆಡಿಎಸ್‌ನ 7 ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.









