ಮಹಾ ಪ್ರಮಾದದಲ್ಲಿ VIRAT.. 43 ರನ್ ಬೇಕೇಬೇಕು..
ಸೆಂಚೂರಿ ಹುಡುಕಾಟದಲ್ಲಿರುವ ವಿರಾಟ್ ಕೊಹ್ಲಿ ಒಂದು ಅಪರೂಪದ ದಾಖಲೆಯ ಪ್ರಮಾದದಲ್ಲಿದ್ದಾರೆ.
ಇದೇ ತಿಂಗಳ 12ರಂದು ಬೆಂಗಳೂರಿನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ವಿರಾಟ್ 43 ರನ್ ಗಳಿಸದಿದ್ದರೆ ಆರು ವರ್ಷಗಳಲ್ಲಿ ಮೊದಲ ಬಾರಿಗೆ 50 ಸರಾಸರಿ ಅಂಕ ಕಳೆದುಕೊಳ್ಳಲಿದ್ದಾರೆ.
ಕೊಹ್ಲಿ ಪ್ರಸ್ತುತ ಎಲ್ಲಾ ಮಾದರಿ ಕ್ರಿಕೆಟ್ 50 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ.
ಇದರೊಂದಿಗೆ ಈ ಪೀಳಿಗೆಯ ಯಾವೊಬ್ಬ ಕ್ರಿಕೆಟಿಗನಿಗೆ ಸಾಧ್ಯವಾಗದ ದಾಖಲೆಯನ್ನ ಹೊಂದಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಇದೇ ದಾಖಲೆ ಅಪಾಯದಲ್ಲಿದೆ.
ಈಗಾಗಲೇ ಎರಡೂವರೆ ವರ್ಷಗಳಿಂದ ಶತಕದ ಗಡಿ ತಲುಪಲು ಹರಸಾಹಸ ಪಡುತ್ತಿರುವ ಕೊಹ್ಲಿ ದಾಖಲೆಯನ್ನೂ ಕಳೆದುಕೊಂಡರೆ ಮತ್ತಷ್ಟು ಒತ್ತಡ ಎದುರಿಸಬೇಕಾಗುತ್ತದೆ ಎಂಬುದು ವಿಶ್ಲೇಷಕರ ಹಾಗೂ ಅವರ ಅಭಿಮಾನಿಗಳ ಅಭಿಪ್ರಾಯವಾಗಿದೆ.
ಕೊಹ್ಲಿ ಪ್ರಸ್ತುತ 100 ಟೆಸ್ಟ್‌ಗಳಲ್ಲಿ 50.35, 260 ODIಗಳಲ್ಲಿ 58.07 ಮತ್ತು 97 T20 ಗಳಲ್ಲಿ 51.50 ಸರಾಸರಿ ಹೊಂದಿದ್ದಾರೆ.
ಕೊಹ್ಲಿ ತಮ್ಮ 52 ನೇ ಟೆಸ್ಟ್‌ನಲ್ಲಿ ಮೊದಲ ಬಾರಿಗೆ 50 ಸರಾಸರಿಯನ್ನು ಸಾಧಿಸಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ 235 ರನ್ ಗಳಿಸಿದ್ದರು.
2019ರಲ್ಲಿ ಈಡನ್ ಗಾರ್ಡನ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ನಲ್ಲಿ ಕೊಹ್ಲಿ ಕೊನೆಯ ಬಾರಿಗೆ ಶತಕ (70ನೇ ಶತಕ) ಗಳಿಸಿದ್ದರು. ಆ ಟೆಸ್ಟ್ ಬಳಿಕ ವಿರಾಟ್ ಕೊಹ್ಲಿ 29 ಇನ್ನಿಂಗ್ಸ್‌ಗಳಲ್ಲಿ ಕೇವಲ 28.75 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
virat-kohlis-50-average-all-formats









