ಉಕ್ರೇನಿಯನ್ನರಿಗೆ ಆಶ್ರಯ ನೀಡಲು ಮುಂದಾದ ಕೆನಡಾ – Saaksha Tv
ಪೋಲೆಂಡ್: ಯುದ್ಧದಿಂದಾಗಿ ನಿರಾಶ್ರಿತರಾದ ಉಕ್ರೇನ್ ಪ್ರಜೆಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಆಶ್ರಯ ನೀಡುವುದಾಗಿ ಪೋಲೆಂಡ್ನಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ನಡೆಯುತ್ತಿದ್ದು, ಉಕ್ರೇನ್ ನಾಗರಿಕರು ದೇಶ ಬಿಟ್ಟು ಪಲಾಯಾನ ಮಾಡುತ್ತಿದ್ದಾರೆ. ಪಲಾಯಾನ ಗೈದ ನಾಗರಿಕರಿ ಆಶ್ರಯ ನೀಡಲು ಯಾವ ದೇಶವು ಮುಂದೆ ಬರದಿದ್ದು, ಈಗ ಕೆನಡಾ ಉಕ್ರೇನ್ ನಾಗರಿಕರಿಗೆ ಆಶ್ರಯ ನೀಡಲು ಮುಂದಾಗಿದೆ. ಈ ಕುರಿತು ಮಾತನಾಡಿದ ಕೆನಡಾ ಅಧ್ಯಕ್ಷ ಲಕ್ಷಾಂತರ ಉಕ್ರೇನಿಯನ್ನರು ತಮ್ಮ ದೇಶವನ್ನು ತೊರೆದು ಪಲಾಯನ ಮಾಡುವುದನ್ನು ನೋಡಿದರೆ, ನಮ್ಮ ಹೃದಯಗಳು ಒಡೆಯುತ್ತವೆ ಎಂದು ಟ್ರೂಡೋ ಹೇಳಿದ್ದಾರೆ.
ಫೆಬ್ರವರಿ 24ರಿಂದ ಸುಮಾರು 15 ಲಕ್ಷ ಉಕ್ರೇನ್ ಜನರು ಪೋಲೆಂಡ್ಗೆ ಪಲಾಯನ ಮಾಡಿದ್ದಾರೆ. ನಿರಾಶ್ರಿತರಿಗೆ ಕೆನಡಾ ಸಹಾಯ ಮಾಡುತ್ತದೆ ಎಂದು ಟ್ರೂಡೋ ಭರವಸೆ ನೀಡಿದ್ದಾರೆ. ಇದರ ಜೊತೆಗೆ ರಷ್ಯಾದ ವಿರುದ್ಧ ಕಠಿಣ ನಿರ್ಬಂಧಗಳನ್ನು ಮುಂದುವರೆಸುವ ಕುರಿತು ಚರ್ಚೆ ನಡೆಸಿದರು.
ಅಲ್ಲದೆ ನಿರಾಶ್ರಿತರು ಕೆನಡಾಕ್ಕೆ ಬೇಗನೆ ಬರಲು ಸಾಧ್ಯವಾಗುವಂತೆ ಕಾರ್ಯವಿಧಾನಗಳನ್ನು ವೇಗಗೊಳಿಸಲಾಗುತ್ತದೆ. ನಿರಾಶ್ರಿತರ ವಿದ್ಯಾಭ್ಯಾಸ ಮತ್ತು ಕೆಲಸ ಮಾಡಲು ನಾವು ಅವಕಾಶ ನೀಡುತ್ತೇವೆ ಎಂದು ಡುಡಾ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಟ್ರುಡೊ ಭರವಸೆ ನೀಡಿದ್ದಾರೆ.
ಪೋಲೆಂಡ್ ಅಧ್ಯಕ್ಷ ಆಂಡ್ರೆಜ್ ಡುಡಾ ಮತ್ತು ಪ್ರಧಾನ ಮಂತ್ರಿ ಮಾಟಿಯುಸ್ಜ್ ಮೊರಾವಿಕಿ ಅವರೊಂದಿಗಿನ ಮಾತುಕತೆ ನಡೆಸಿದ ಟ್ರುಡೋ ಇದೇ ವೇಳೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ಕೆಲವು ವಿಚಾರಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಯುದ್ಧ ಮುಗಿದ ನಂತರ ನಿರಾಶ್ರಿತರು ತಮ್ಮ ದೇಶಕ್ಕೆ ಹಿಂದಿರುಗಬಹುದು. ಕೆನಡಾದಲ್ಲಿಯೇ ತಮ್ಮ ಜೀವನವನ್ನು ಮುಂದುವರಿಸಲು ಆಯ್ಕೆ ಮಾಡುವ ನಿರಾಶ್ರಿತರಿಗೆ ಅವಕಾಶ ಕಲ್ಪಿಸಿಕೊಡುವ ಬಗ್ಗೆ ನಾವು ಆಲೋಚಿಸುತ್ತಿದ್ದೇವೆ ಎಂದು ಟ್ರೂಡೋ ಹೇಳಿದ್ದಾರೆ.








