ಮೈಸೂರು : ಜುಬಿಲೆಂಟ್ ಕಾರ್ಖಾನೆಯಿಂದ ಕೊರೊನಾ ಹೆಚ್ಚು ಹರಡಿದೆ. ಈ ಹಿನ್ನೆಲೆಯಲ್ಲಿ ಜುಬಿಲೆಂಟ್ ಕಾರ್ಖಾನೆ ನಿಯಮ ಉಲ್ಲಂಘನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಚಾರಕ್ಕೆ ಸಂಸದ ವಿ. ಶ್ರೀನಿವಾಸ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಬಿಲೆಂಟ್ ಕಾರ್ಖಾನೆ ಮೇಲೆ ತನಿಖೆ ಅನಾವಶ್ಯಕವಾಗಿದೆ. ಕಾರ್ಖಾನೆಯಿಂದ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.. ಸದ್ಯದ ಮಟ್ಟಿಗೆ ಯಾವುದೇ ತನಿಖೆಯ ಅವಶ್ಯಕತೆ ಇಲ್ಲ.. ತನಿಖೆಗೆ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರನ್ನ ನೇಮಿಸಲಾಗಿತ್ತು. ಕೊರೊನಾ ಹರಡಿದರ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಅಂತ ಅವರೇ ಹೇಳಿದ್ದಾರೆ.ಹಾಗಾಗಿ ಜುಬಿಲೆಂಟ್ ಕೋವಿಡ್ ಸೋಂಕಿನ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.. 50 ಸಾವಿರ ಕಿಟ್, 10 ಹತ್ತು ಗ್ರಾಮ ದತ್ತು ತೆಗೆದುಕೊಳ್ಳುವ ಬಗ್ಗೆ ಜುಬಿಲೆಂಟ್ ತಿಳಿಸಿದೆ.. ನಮಗೆ ಜನರ ಹಿತಾಸಕ್ತಿ ಮುಖ್ಯವೇ ಹೊರೆತು ಕಾರ್ಖಾನೆಯದ್ದಲ್ಲ ಎಂದು ಹೇಳಿದ್ದಾರೆ
ಕನ್ನಡ Zee5ನಲ್ಲಿ ಮತ್ತೆ ತೆರೆದುಕೊಳ್ಳಲಿದೆ ‘ಅಯ್ಯನ ಮನೆ’ಯ ನಿಗೂಢ ಲೋಕ: ಅಕ್ಟೋಬರ್ 23ರಿಂದ ಎರಡನೇ ಸೀಸನ್ ಪ್ರಸಾರ
ಬೆಂಗಳೂರು: ಕನ್ನಡ ಜೀ5 (Zee5) ಓಟಿಟಿ ವೇದಿಕೆಯು ತನ್ನ ಬಹುನಿರೀಕ್ಷಿತ ಸೈಕಲಾಜಿಕಲ್ ಮಿಸ್ಟ್ರಿ ಥ್ರಿಲ್ಲರ್ ವೆಬ್ ಸರಣಿ 'ಅಯ್ಯನ ಮನೆ'ಯ ಎರಡನೇ ಸೀಸನ್ ಅನ್ನು ಪ್ರೇಕ್ಷಕರ ಮುಂದೆ...








