wiw-vs-indw | ಹ್ಯಾಮಿಲ್ಟನ್ ಅಂಗಳದಲ್ಲಿ ಸ್ಮೃತಿ – ಹರ್ಮನ್ ಜುಗಲ್ ಬಂಧಿ..!
ಮಹಿಳಾ ವಿಶ್ವಕಪ್ ಭಾಗವಾಗಿ ಹ್ಯಾಮಿಲ್ಟನ್ ಅಂಗಳದಲ್ಲಿ ನಡೆಯುತ್ತಿರುವ ವೆಸ್ಟ್ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಮೃತಿ ಮಂದಾನ, ಹರ್ಮನ್ ಪ್ರೀತ್ ಕೌರ್ ಶತಕದ ಸಂಭ್ರಮ ಆಚರಿಸಿಕೊಂಡಿದ್ದಾರೆ.
ಇವರ ಶತಕದ ಸಂಭ್ರಮದೊಂದಿಗೆ ಟೀಂ ಇಂಡಿಯಾ ನಿಗದಿತ 50 ಓವರ್ ಗಳಿಗೆ 317 ರನ್ ಗಳಿಸಿದೆ. ಇದು ವಿಶ್ವಕಪ್ ನಲ್ಲಿ ಭಾರತದ ಪಾಲಿನ 2ನೇ ಗರಿಷ್ಠ ಮೊತ್ತವಾಗಿದೆ.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ಆರಂಭದಲ್ಲೇ ಆಘಾತ ಅನುಭವಿಸಿತ್ತು.
78 ರನ್ ಗಳಿಸುವಷ್ಟರಲ್ಲಿ ಭಾರತ ತಂಡದ ಪ್ರಮುಖ ಮೂವರು ಆಟಗಾರ್ತಿಯರು ಪೆವಿಲಿಯನ್ ಸೇರಿಕೊಂಡಿದ್ದರು.
ಈ ಹಂತದಲ್ಲಿ ಸ್ಮತಿ ಮಂದಾನ, ಹರ್ಮನ್ ಪ್ರೀತ್ ಕೌರ್ ಜೊತೆ ಸೇರಿಕೊಂಡು ತಂಡಕ್ಕೆ ಚೇತರಿಕೆ ನೀಡಿದ್ರು.
ಅಲ್ಲದೆ 4ನೇ ವಿಕೆಟ್ 184 ರನ್ ಗಳ ದಾಖಲೆಯ ಜೊತೆಯಾಟವನ್ನು ಆಡಿದ್ರು.
ಅಂತಿಮವಾಗಿ ಸ್ಮತಿ ಮಂದಾನ ಅವರು 119 ಎಸೆತಗಳಲ್ಲಿ 13 ಬೌಂಡರಿ ಮತ್ತು 4 ಸಿಕ್ಸರ್ ಗಳ ಸಹಾಯದಿಂದ 123 ರನ್ ದಾಖಲಿಸಿದ್ರು.
ಇನ್ನೊಂದೆಡೆ ಹರ್ಮನ್ ಪ್ರೀತ್ ಕೌರ್ 107 ಎಸೆತಗಳಲ್ಲಿ 10 ಬೌಂಡ್ರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 107 ರನ್ ಸಿಡಿಸಿದ್ರು.
ಇವರಿಬ್ಬರ ಶತಕದ ಸಂಭ್ರಮದೊಂದಿಗೆ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 317 ರನ್ ಗಳಿಸಿದೆ.
ಆ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ಪಂದ್ಯ ಗೆಲ್ಲಲು 318 ರನ್ ಗಳ ಗುರಿಯನ್ನ ನೀಡಿದೆ. wiw-vs-indw West Indies Women need 305 runs








