40 ದಿನಗಳ ಅಂತರದಲ್ಲಿ ಒಂದೇ ಕುಟುಂಬದ 3 ಜನರ ಸಾವು – Saaksha Tv
ಮಂಗಳೂರು: ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.
ಸಿಲ್ವೆಸ್ಟರ್ ಡಿಸೋಜ(51), ತೆರೆಸಾ ಡಿಸೋಜ(65), ಸೈಮನ್ ಡಿಸೋಜ(55) ಮೃತ ದುರ್ದೈವಿಗಳು. ಆಶ್ಚರ್ಯದ ಸಂಗತಿಯಂದರೆ ಒಂದೇ ಕುಟುಂಬದ ಅಕ್ಕ, ಇಬ್ಬರು ತಮ್ಮಂದಿರಿದ್ದು, ನಲವತ್ತು ದಿನಗಳ ಅಂತರದಲ್ಲಿ ಮೃತ ಹೊಂದಿದ್ದಾರೆ.
ಸಿಲ್ವೆಸ್ಟರ್ ಡಿಸೋಜ ಅವರು ನೆಲ್ಯಾಡಿ ಗ್ರಾಮದ ಪಡುಬೆಟ್ಟು ತೊಟ್ಟಿಲಗುಂಡಿ ನಿವಾಸಿಯಾಗಿದ್ದು, ಕೆಲ ದಿನಗಳ ಹಿಂದೆ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮೃತ ಸಿಲ್ವೆಸ್ಟರ್ ಸಹೋದರಿ ಬೆಳ್ತಂಗಡಿ ಸವಣಾಲು ನಿವಾಸಿಯಾಗಿದ್ದ ತೆರೆಸಾ ಡಿಸೋಜ(65) ಜ.29ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಇದಾದ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರ ಸೈಮನ್ ಡಿಸೋಜ(55) ರವರು ಫೆ.26ರಂದು ಮನೆಯಲ್ಲಿಯೇ ನಿಧನರಾಗಿದ್ದರು. ಇದೀಗ ಸಿಲ್ವೆಸ್ಟರ್ರವರು ಸಾವು ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.
ಕುಟುಂಬ ಸದಸ್ಯರು ನೋವಿನಲ್ಲೂ ಮಾನವೀಯತೆ ಮೆರೆದಿದ್ದು, ಮೃತ ಸಿಲ್ವೆಸ್ಟರ್ ಅವರ ಎರಡು ಕಣ್ಣುಗಳನ್ನು ದಾನ ಮಾಡಲು ಮುಂದಾಗಿದೆ. ಮತ್ತಿಬ್ಬರ ಬಾಳಿಗೆ ಬೆಳಕಾಗುವ ಉದ್ದೇಶದಿಂದ ತಂದೆಯ ಎರಡು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ಸಿಲ್ವೆಸ್ಟರ್ರವರ ಪುತ್ರಿ ರೋಹಿತಾ ತಿಳಿಸಿದ್ದಾರೆ.








