Rohit sharma | ಕ್ಯಾಪ್ಟನ್ಸಿ ಒತ್ತಡದಲ್ಲಿ ಮಾಯವಾಗುತ್ತಿದ್ದಾನೆ “ಹಿಟ್ ಮ್ಯಾನ್”
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಸ್ವದೇಶದಲ್ಲಿ ಭಾರತ ಕ್ರಿಕೆಟ್ ತಂಡ ಅಮೋಘ ಪ್ರದರ್ಶನ ನೀಡುತ್ತಿದೆ. ಬ್ಯಾಕ್ ಟು ಬ್ಯಾಕ್ ಸರಣಿಗಳನ್ನು ಗೆಲ್ಲುತ್ತಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಮೊದಲು ನ್ಯೂಜಿಲೆಂಡ್, ನಂತರ ವೆಸ್ಟ್ ಇಂಡೀಸ್, ಈಗ ಶ್ರೀಲಂಕಾ ತಂಡಗಳ ವಿರುದ್ಧ ಭಾರತ ತಂಡ ದಿಗ್ವಿಜಯ ಸಾಧಿಸಿದೆ.
ಆದ್ರೆ ಬ್ಯಾಟಿಂಗ್ ನಲ್ಲಿ ರೋಹಿತ್ ಶರ್ಮಾ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯ ಮೂರೂ ಪಂದ್ಯಗಳಲ್ಲಿ ಓಪನ್ ಆಗಿ ಕ್ರೀಸ್ ಗೆ ಬಂದ ರೋಹಿತ್ ಶರ್ಮಾ ಗಳಿಸಿದ್ದು ಕೇವಲ 50 ರನ್ ಗಳನ್ನ ಮಾತ್ರ.
ಇದೀಗ ಟೆಸ್ಟ್ ಸರಣಿಯಲ್ಲೂ ರೋಹಿತ್ ಬ್ಯಾಟ್ ಸೌಂಡ್ ಮಾಡ್ತಿಲ್ಲ. ಮೊದಲ ಟೆಸ್ಟ್ ಪಂದ್ಯದಲ್ಲಿ 20+ ರನ್ ಗಳಿಸಿದ್ದ ರೋಹಿತ್ ಶರ್ಮಾ, ಎರಡನೇ ಪಂದ್ಯದಲ್ಲಿ 15 ರನ್ ಗಳಿಸಿದ್ದಾರೆ.
ಅಂದಹಾಗೆ ಕೆಲ ದಿನಗಳ ಹಿಂದೆ ರೋಹಿತ್ ಶರ್ಮಾ ಕುರಿತು ಭಾರತದ ಮಾಜಿ ಕ್ರಿಕೆಟಿಗ ಸಾಬಾ ಕರೀಮ್ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದರು. ರೋಹಿತ್ ಶರ್ಮಾ ಬ್ಯಾಟಿಂಗ್ ನಿಂದಾಗಿಯೇ ಟೀಂ ಇಂಡಿಯಾದಲ್ಲಿದ್ದಾರೆ, “ನಾಯಕತ್ವ ಕೇವಲ ಹೆಚ್ಚುವರಿ ಜವಾಬ್ದಾರಿಯಾಗಿದೆ. ರೋಹಿತ್ ಬ್ಯಾಟಿಂಗ್ ಮೇಲಿನ ಹಿಡಿತವನ್ನು ಕಳೆದುಕೊಳ್ಳಬಾರದು. ನ್ಯಾಯಕತ್ವದ ಹೆಚ್ಚುವರಿ ಜವಾಬ್ದಾರಿಯಿಂದಾಗಿ ಬ್ಯಾಟಿಂಗ್ ನಲ್ಲಿ ಮಿಂಚುವಲ್ಲಿ ಹಲವು ನಾಯಕರು ವಿಫಲರಾದ ನಿದರ್ಶನಗಳೂ ಇವೆ. ರೋಹಿತ್ ವಿಷಯದಲ್ಲಿ ಹೀಗಾಗಬಾರದು ಎಂದು ಎಚ್ಚರಿಸಿದ್ದರು.
rohit-sharma-facing captaincy pressure









