ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ 18ನೇ ದಿನವೂ ಮುಂದುವರಿದಿದೆ. ಇದೀಗ ಉಕ್ರೇನ್‌ನ ಸೇನಾ ನೆಲೆಯ ಮೇಲೆ ರಷ್ಯಾದ ವಾಯು ಪಡೆ ವೈಮಾನಿಕ ದಾಳಿ ನಡೆಸಿದೆ.. ಈ ವೈಮಾನಿಕ ದಾಳಿಯಲ್ಲಿ ಕನಿಷ್ಠ 35 ಮಂದಿ ಸಾವಿಗೀಡಾಗಿದ್ದಾರೆ ಹಾಗೂ 57 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ..
ಪೋಲೆಂಡ್‌ನ ಗಡಿಗೆ ಸಮೀಪದಲ್ಲಿ ಭಾನುವಾರ ವೈಮಾನಿಕ ದಾಳಿ ನಡೆದಿರುವುದಾಗಿ ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಡೆದಿರುವ ಸ್ಥಳವು ಪೋಲೆಂಡ್ ಗಡಿ ಭಾಗಕ್ಕೆ 25 ಕಿ.ಮೀ. ದೂರದಲ್ಲಿದೆ. ನ್ಯಾಟೊ ಪಡೆಗಳೊಂದಿಗೆ ಜಂಟಿ ಸಮರಾಭ್ಯಾಸ ಚಟುವಟಿಕೆಗಳನ್ನು ಇಲ್ಲಿನ ಸೇನಾ ತರಬೇತಿ ಕೇಂದ್ರದಲ್ಲಿ ನಡೆಸಲಾಗುತ್ತಿತ್ತು.
ರಷ್ಯಾದ ವಿಮಾನಗಳು ಸುಮಾರು 30 ರಾಕೆಟ್‌ಗಳನ್ನು ಸೇನಾ ನೆಲೆಯ ಮೇಲೆ ಉಡಾಯಿಸಿವೆ. ಇಡೀ ಪ್ರವೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು, 19ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿರುವುದಾಗಿ ಸ್ಥಳೀಯ ಗವರ್ನರ್ ಮಾಕ್ಸಿಮ್ ಅವರು ತಿಳಿಸಿರುವುದಾಗಿ ವರದಿಯಾಗಿದೆ..








