ಜೋರು ಗುಡುಗು ಮಳೆ ಬರಬಾರದೆ,ಎಲ್ಲಿಯಾದರೂ ಸ್ಟ್ರೈಕ್ ಆಗಬಾರದೆ,ಇಲ್ಲ ಯಾರಾದರೂ ಸಾಯಬಾರದೆ ಆಗಲಾದರೂ ಒಂದು ದಿನ ಕಾಲೇಜಿಗೆ ರಜೆ ಸಿಗುತ್ತಿತ್ತು ಎಂದು ರಜೆಗಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದರು. ಇಂದು ಕೊರೊನ ಎಂಬ ಮಹಮಾರಿಯಿಂದ ಇಡೀ ಸಮಾಜವೇ ಸ್ತಬ್ಧಗೊಂಡಿದ್ದು, ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಿ ಎರಡು ತಿಂಗಳುಗಳಾದವು ಆರಂಭದಲ್ಲಿ ರಜೆ ಸಿಕ್ಕಾಗ(ಲಾಕ್ ಡೌನ್ ಆದಾಗ) ಕೊರೋನದ ಭೀಕರತೆಯನ್ನು ಅರಿಯದೆ ರಜೆಯ ಕುರಿತು ಅತೀವವಾಗಿ ಸಂತಸ ಪಟ್ಟವರು ಅದು ವಿಧ್ಯಾರ್ಥಿಗಳು, ಕಾರಣ ತರಗತಿಗಳು ಇಲ್ಲ, ಪರೀಕ್ಷೆ ಇಲ್ಲ, ನೋಟ್ಸ್ ನನ್ನು ನಾಳೆಯೆ ಸಬ್ಮಿಟ್ ಮಾಡಬೇಕೆಂಬ ಚಿಂತೆಯಿಲ್ಲ ಎಂಬುದು.
ಆದರೆ ಇಂದು ಯಾವಾಗ ಈ ಕೊರೋನ ಎಂಬ ಹೆಮ್ಮಾರಿ ನಾಶವಾಗುತ್ತದೆ ಯಾವಾಗ ನಾವು ಕಾಲೇಜಿಗೆ ಹೋಗುತ್ತೇವೆ ಎನ್ನುವ ಚಿಂತೆಯಲ್ಲಿದ್ದಾರೆ, ಕಾರಣ ವಿದ್ಯಾರ್ಥಿಯು ತನ್ನ ಭವಿಷ್ಯದ ಬಗೆಗೆ ಕಟ್ಟಿಕೊಂಡ ಕನಸು…. ಅದರಲ್ಲಂತು ಅಂತಿಮ ಘಟ್ಟದ ವಿದ್ಯಾರ್ಥಿಗಳು ಅಂದರೆ ಎಸ್.ಎಸ್.ಎಲ್.ಸಿ ,ದ್ವೀತಿಯ ಪಿಯುಸಿ, ಅಂತಿಮ ಪದವಿ ಹೀಗೆ ಇವರು ಒಮ್ಮೆ ಪರೀಕ್ಷೆ ಮುಗಿದು ಮುಂದಿನ ಜೀವನದ ಸ್ಥಿರತೆಯ ಬಗೆಗೆ ಯೋಚಿಸುತ್ತಿರುವಾಗ ಈ ಲಾಕ್ ಡೌನ್ ಅವರನ್ನು ಒಮ್ಮೆ ಬುಡಮೇಲು ಮಾಡಿದಂತಾಗಿದೆ.
ಇನ್ನು ಸದಾ ಗೆಳೆಯರ ಜೊತೆಗೆ ಹೊಡೆಯುತ್ತಿದ್ದ ಹರಟೆ,ತರಗತಿಯಲ್ಲಿ ಮಾಡುತ್ತಿದ್ದ ಕೀಟಲೆಗಳು,ಕ್ಲಾಸ್ ನಡೆಯುವಾಗ ತೂಕಡಿಸುತ್ತಿದ್ದ ಕಣ್ಣುಗಳು, ತರಗತಿಯ ಮದ್ಯೆ ಕದ್ದು ತಿನ್ನುತ್ತಿದ್ದ ತಿಂಡಿಗಳು, ವಿದ್ಯಾರ್ಥಿಗಳ ಜೊತೆ ಸ್ನೇಹಿತರಂತೆ ಇದ್ದ ಉಪನ್ಯಾಸಕರು, ಅವರ ಕ್ಲಾಸ್,ಅವರು ನೀಡುತ್ತಿದ್ದ ಜೀವನದ ಬಗೆಗಿನ ಪಾಠ ಇವೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಮತ್ತೆ ಕಾಲೇಜು ಯಾವಾಗ ಆರಂಭವೋ …? ಎಂದು ಯೋಚಿಸುತ್ತಿದ್ದಾರೆ.
ಅಂತಿಮ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯ ನಂತರ ಮುಂದೆ ಉದ್ಯೋಗವೋ ಇಲ್ಲ ಮತ್ತೆ ವಿದ್ಯಾಭ್ಯಾಸವೊ.. ಇನ್ನೇನು ಎನ್ನುವ ಚಿಂತೆಯ ನಡುವೆ ಸ್ಟೂಡೆಂಟ್ ಲೈಫ್ ಮುಗಿತ್ತಿದೆ ಎಲ್ಲಾ ಸ್ನೇಹಿತರು ದೂರ ದೂರ ಆಗುತ್ತಿದ್ದೇವೆ,ಇನ್ನೇನು ಪರೀಕ್ಷಾ ರಜಾ ಆರಂಭವಾಗುತ್ತದೆ ಅದರೊಳಗೆ ಆದಷ್ಟು ಕಾಲೇಜು ಲೈಫ್ ಎನ್ಜಾಯ್ ಮಾಡ್ಬೇಕು ಅನ್ನುವಷ್ಟರಲ್ಲಿ ಈ ಕೋರೊನ ಅವರ ಆಸೆಗೆ ನೀರೆರೆಚಿತು.ಒಂದೆಡೆ ಕಾಲೇಜು ತರಗತಿಗಳಿಲ್ಲ,ಪರೀಕ್ಷೆಯಂತು ನಡೆದಿಲ್ಲ ಇದು ವಿದ್ಯಾರ್ಥಿಗಳಿಗೆ(ಅಂತಿಮ ಘಟ್ಟದ) ಮುಂದೇನು ಎಂಬ ಚಿಂತನೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.ಇದರಿಂದಾಗಿ ಅವರು ಕಾಲೇಜು ಯಾವಾಗ ಆರಂಭ ಎಂದು ಚಿಂತಿಸುವಂತಾಗಿದೆ.
“Student Life is golden life”
-ನಳಿನಿ ಎಸ್ ಸುವರ್ಣ (ಜಾರ್ಕಳ ಮುಂಡ್ಲಿ)








