ಹಿಜಾಬ್ ತೀರ್ಪು – ಪರೀಕ್ಷೆ ಬಹಿಷ್ಕರಿಸಿ ಕಾಲೇಜಿನಿಂದ ಹೊರನಡೆದ ವಿದ್ಯಾರ್ಥಿನೀಯರು
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದೆ . ಕೋರ್ಟ್ ನಲ್ಲಿ ಅರ್ಜಿ ವಜಾ ಆದ ಹಿನ್ನಲೆ 35 ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ. ಹಿಜಬ್ ತೆಗೆಯದೆ ಬೆಳಗ್ಗೆಯಿಂದ ಕೋರ್ಟ್ ಆದೇಶಕ್ಕೆ ಕಾದು ಕುಳಿತಿದ್ದ ವಿದ್ಯಾರ್ಥಿನಿಯರು ತೀರ್ಪು ಪ್ರಕಟವಾಗುತ್ತಿದ್ದಂತೆಯೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪೂರ್ವಭಾವಿ ಪರಿಕ್ಷೆ ಬಿಟ್ಟು ಹೊರಕ್ಕೆ ನಡೆದಿದ್ದಾರೆ. ಹಿಜಬ್ ಬಿಟ್ಟು ಕ್ಲಾಸ್‍ಗೆ ಬರಲ್ಲ ಎಂದು ಪರೀಕ್ಷೆ ಬಿಟ್ಟು 08 ವಿದ್ಯಾರ್ಥಿಗಳು ಮನೆಗೆ ತೆರಳಿದ್ದಾರೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದಾರೆ ಎಂದು ಸರ್ಕಾರಿ ಕಾಲೇಜಿನ ಪ್ರಾಂಶುಪಾಲೆ ಶಕುಂತಲಾ ಮಾಹಿತಿ ನೀಡಿದ್ದಾರೆ.
ಜ್ಯೂನಿಯರ್ ಪಿಯು ಕಾಲೇಜು ವಿದ್ಯಾರ್ಥಿನಿ ಅಸ್ರಾ ಮಾಧ್ಯಮದವರೊಂದಿಗೆ ಮಾತನಾಡಿ, ಹೈಕೋರ್ಟ್ ಆದೇಶ ಬಂದರೂ ನಾವು ಹಿಜಬ್ ಧರಿಸುತ್ತೆವೆ, ನಮಗೆ ಶಿಕ್ಷಣ ಹಾಗೂ ಹಿಜಬ್ ಕೂಡ ಮುಖ್ಯವಾಗಿದೆ. ನಾವು ಹಿಜಬ್ ತೆಗೆಯಲ್ಲ. ಹಿಜಬ್ ಧರಿಸಿ ಪೂರಕ ಪರೀಕ್ಷೆ ಬರೆಯುತ್ತೆವೆ. ಹಿಜಬ್ ತೆಗೆದು ಪರೀಕ್ಷೆ ಬರೆಬೇಕೆಂದರೆ ನಾವು ಪರೀಕ್ಷೆ ಬರೆಯಲ್ಲ, ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.