Puneeth Birthday | ಅಪ್ಪು ಜನ್ಮದಿನಕ್ಕೆ 202 ಕಿ.ಮೀ. ಸೈಕಲ್ ಜಾಥಾ!
ಡಾ. ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ ಆಚರಣೆ ಮಾಡಲು ಅಭಿಮಾನಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನ ನಡೆಸಿದ್ದಾರೆ.
ಅಪ್ಪು ಹೆಸರನ್ನ ಅಮರವಾಗಿಸಲು ಅಭಿಮಾನಿಗಳು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಅದೇ ರೀತಿ ಐ ಸೈಕಲ್ ತಂಡದವರು ಬೆಂಗಳೂರಿನಿಂದ ಡಾ.ರಾಜ್ ಕುಮಾರ್ ಹುಟ್ಟೂರು ಗಾಜನೂರಿಗೆ ಜಾಥ ನಡೆಸಲಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರಿಗೆ ಸೈಕಲಿಂಗ್ ಬಗ್ಗೆ ವಿಶೇಷ ಆಸಕ್ತಿಯನ್ನ ಹೊಂದಿದ್ದರು. ಬಿಡುವಿನ ಸಂದರ್ಭದಲ್ಲಿ ಸೈಕಲ್ ಸವಾರಿಯನ್ನ ಕೂಡ ಮಾಡುತ್ತಿದ್ದರು.
ಹೀಗಾಗಿ ಅವರ ಅಭಿಮಾನಿಗಳು ಬರೋಬ್ಬರಿ 202 ಕಿಲೋ ಮೀಟರ್ ಸೈಕಲ್ ಜಾಥಾ ನಡೆಸಲು ಮುಂದಾಗಿದ್ದಾರೆ.
ಪುನೀತ್ ರಾಜ್ಕುಮಾರ್ ಸಮಾಧಿಯಿಂದ ಡಾ. ರಾಜ್ಕುಮಾರ್ ಹುಟ್ಟೂರಾದ ಗಾಜನೂರಿನವರೆಗೆ ಈ ಜಾಥಾ ನಡೆಯಲಿದೆ.
ಐಸೈಕಲ್ ತಂಡದ 20ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗಿ ಆಗಿದ್ದಾರೆ. ಬುಧವಾರ ಜಾಥಾಗೆ ಚಾಲನೆ ನೀಡಲಾಗಿದೆ.
ಮೊದಲ ದಿನ 112 ಕಿಮೀ ದೂರ ಕ್ರಮಿಸಲಿದ್ದು, ಗುರುವಾರ ಮಳವಳ್ಳಿಯಿಂದ ಗಾಜನೂರಿನವರೆಗೆ 90 ಕಿಮೀ ಸೈಕಲ್ ಜಾಥಾ ಆಗಲಿದೆ.
fans to conduct 202 km cycle rally for puneeth birthday









