ನಾನು ಲವ್ ಜಿಹಾದ್ ಗೆ ಒಳಗಾಗಿದ್ದೇನೆ | ಪತಿ ವಿರುದ್ಧ ಪತ್ನಿ ಆರೋಪ – Saaksha Tv
ಹುಬ್ಬಳ್ಳಿ: ನಾನು ಲವ್ ಜಿಹಾದ್ ಆಗಿದ್ದೇನೆ ಎಂದು ಪತ್ನಿಯೇ, ಪತಿ ವಿರುದ್ಧ ಆರೋಪ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಕಲೆ ದಿನಗಳ ಹಿಂದೆ ಪತ್ನಿಯನ್ನು ಪತಿಯೇ ಮನಬಂದಂತೆ ಕೊಚ್ಚಿ ಕೊಲೆ ಮಾಡಲು ಯತ್ನ ಮಾಡಿರುವ ಪ್ರಕರಣ ನಡೆದಿತ್ತು, ಸಧ್ಯ ಪ್ರಕರಣ ತಿರುವು ಪಡೆದುಕೊಂಡಿದೆ. ಪತಿಯಿಂದ ಹಲ್ಲೆಗೆ ಒಳಗಾದ ಅಪೂರ್ವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತನ್ನ ಪತಿಯ ಈ ವರ್ತನೆಗೆ ಲವ್ ಜಿಹಾದ್ ಕಾರಣ ಎಂದು ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಸರ್ಕಾರಕ್ಕೆ ಕೈಮುಗಿದು ಮನವಿ ಮಾಡಿಕೊಳ್ಳುತ್ತಿನಿ ದಯವಿಟ್ಟು ರಾಜ್ಯದಲ್ಲಿ ಲವ್ ಜಿಹಾದ್‍ಗೆ ಕಠಿಣ ಕಾನೂನು ತನ್ನಿ. ಎಷ್ಟೋ ಅಮಾಯಕ ಹೆಣ್ಣು ಮಕ್ಕಳು ಪ್ರೀತಿ ಹೆಸರಿನಲ್ಲಿ ಮೋಸ ಹೋಗುತ್ತಿದ್ದಾರೆ ಎಂದು ಲವ್ ಜಿಹಾದ್‍ಗೆ ಒಳಗಾಗಿ ಹಲ್ಲೆಗೊಳ್ಳಗಾದ ಅಪೂರ್ವ ಪುರಾಣಿಕ ಅಲಿಯಾಸ್ ಆರ್ಫಾ ಬಾನು ಅಳಲು ತೋಡಿಕೊಂಡಿದ್ದಾರೆ.
ವಿದ್ಯಾಭ್ಯಾಸಕ್ಕೆಂದು ನಾನು ಆಗಾಗ ಇಜಾಜ್ ಆಟೋದಲ್ಲಿ ಹೋಗುತ್ತಿದ್ದೆ. ಇದನ್ನು ದುರುಪಯೋಗ ಪಡಿಸಿಕೊಂಡು ಆತ ನನ್ನ ಮೇಲೆ ಅತ್ಯಾಚಾರ ಎಸಗಿದ ಅತ್ಯಾಚಾರದ ವೀಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡೋಕೆ ಶುರು ಮಾಡಿದ್ದನು ಎಂದಿದ್ದಾರೆ.
ತಾಯಿ ಮತ್ತಿತರರಿಗೆ ಹೇಳಿದರೆ ವೀಡಿಯೋ ಬಹಿರಂಗಪಡಿಸೋದಾಗಿ ಎಚ್ಚರಿಸಿದ್ದನು. ಅನಿವಾರ್ಯವಾಗಿ ನಾನು ಮದುವೆಯಾಗೋಕೆ ಒಪ್ಪಿಕೊಂಡೆ ಬಳಿಕ ಆತ ನನಗೆ ನರಕ ತೋರಿಸಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ.









