ಖೇರ್ಸನ್ ವಿಮಾನ ನಿಲ್ದಾಣವನ್ನು ಮರು ವಶಪಡಿಸಿಕೊಳ್ಳಲು ಉಕ್ರೇನ್ ಕಾರ್ಯಾಚರಣೆ – Saaksha Tv
ಉಕ್ರೇನ್: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ 22 ದಿನಗಳು ಕಳೆದಿದ್ದು, ರಷ್ಯಾ ವಶಪಡಿಸಿಕೊಂಡಿರುವ ಖೇರ್ಸನ್ ವಿಮಾನ ನಿಲ್ದಾಣವನ್ನು ಮರು ವಶಪಡಿಸಿಕೊಳ್ಳಲು ಉಕ್ರೇನ್ ಕಾರ್ಯಾಚರಣೆ ಆರಂಭಸಿದೆ.
ಈ ಕುರಿತು ಮಾಹಿತಿ ನೀಡಿರುವ ಉಕ್ರೇನಿಯನ್ ಮಿಲಿಟರಿಯ ಹಿರಿಯ ಅಧಿಕಾರಿಗಳು ಉಕ್ರೇನ್ನ ಅನಿರೀಕ್ಷಿತ ದಾಳಿಯಿಂದ ಆತಂಕಗೊಂಡಿರುವ ರಷ್ಯನ್ ಪಡೆಗಳು ಯುದ್ಧ ಸಾಮಗ್ರಿಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ.
ಯುದ್ಧದ ಆರಂಭದ ದಿನವೇ ರಷ್ಯಾ ಪಡೆಗಳು ಖೇರ್ಸನ್ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದಿದ್ದವು. ಅಲ್ಲದೇ ಈ ನಡುವೆ ರಷ್ಯಾ ಭೂಸೇನೆ ಉಕ್ರೇನ್ನ ವಿವಿಧ ನಗರಗಳಲ್ಲಿ ನಡೆಸುತ್ತಿದ್ದ ಭಾರಿ ದಾಳಿಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸುತ್ತಿದೆ ಎಂದು ಉಕ್ರೇನ್ ಪಡೆ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೇ ಉಕ್ರೇನ್- ರಷ್ಯಾ ನಡುವೆ ಮುಂದುವರಿದ ಮಾತುಕತೆ. ಆದಾಗ್ಯೂ ಉಕ್ರೇನ್ ಮೇಲೆ ಮಿಲಿಟರಿ ದಾಳಿ ಮುಂದುವರಿದಿದೆ. ರಷ್ಯಾ ದಾಳಿಯನ್ನು ಸೆಪ್ಟೆಂಬರ್ 11 ದಾಳಿಗೆ ಹೋಲಿಸಿರುವ ಉಕ್ರೇನ್ ಅಧ್ಯಕ್ಷರು, ತಮ್ಮ ನೆರವಿಗೆ ಬರುವಂತೆ ಅಮೆರಿಕ ಸಂಸತ್ಗೆ ಮನವಿ ಮಾಡಿದ್ದಾರೆ.
ಹಾಗೇ ಯುಎಸ್ ಅಧ್ಯಕ್ಷ ಜೋ ಬೈಡನ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು “ಯುದ್ಧ ಅಪರಾಧಿ” ಎಂದು ಕರೆದಿದ್ದಾರೆ. ಉಕ್ರೇನಿಯನ್ ಬಂದರು ನಗರ ಮರಿಯುಪೋಲ್ ರಷ್ಯಾ ದಾಳಿಯಿಂದ ಇನ್ನಿಲ್ಲದಂತೆ ನೆಲಕಚ್ಚಿದೆ. ಸೋವಿಯತ್-ಯುಗದ S-300 ವಾಯು ರಕ್ಷಣಾ ವ್ಯವಸ್ಥೆಗಳನ್ನು ಉಕ್ರೇನ್‌ಗೆ ವರ್ಗಾಯಿಸುವ ಬಗ್ಗೆ U.S. ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಚರ್ಚಿಸುವ ನಿರೀಕ್ಷೆಯಿದೆ.









