ಜೊತೆಗಿರದ ಜೀವ ಎಂದೆಂದೂ ಜೀವಂತ. ಇದಕ್ಕೆ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಿದರ್ಶನ.
ಅಭಿಮಾನಿಗಳ ಅಭಿಮಾನ…ನೆಚ್ಚಿನ ನಟನ ಮೇಲಿರುವ ಆಗಾಧವಾದ ಪ್ರೀತಿ.. ನಗು ಮುಖದ ನಗುವಿನ ಸರದಾರನ ಸರಳ ವ್ಯಕ್ತಿತ್ವ..
ಕಲ್ಮಶವಿಲ್ಲದ ಹೃದಯವಂತನ ಮಾನವೀಯತೆ.. ಪರರ ಕಷ್ಟಗಳಿಗೆ ಸದ್ದಿಲ್ಲದೆ ಸ್ಪಂದಿಸುವ ಗುಣವಂತ.. ತನ್ನ ಸಂಪಾದನೆಯ ಹಣವನ್ನೇ ಸಮಾಜ ಸೇವೆಗೆ ಮುಡುಪಾಗಿಡುವ ಸಮಾಜ ಸೇವಕ ಪವರ್ ಸ್ಟಾರ್ ಡಾಕ್ಟರ್ ಪುನೀತ್ ರಾಜ್ ಕುಮಾರ್..!
ಕರುನಾಡ ರಾಜರತ್ನ.. ಕರ್ನಾಟಕದ ಯುವರತ್ನ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮ ಜೊತೆ ಇಲ್ಲ ಅನ್ನೋದನ್ನು ಊಹಿಸಿಕೊಳ್ಳುವುದು ಕಷ್ಟ. ತಗ್ಗಿ ಬಗ್ಗಿ ನಡೆಯುವ… ಹಿರಿಯರಿಗೆ ಗೌರವ ನೀಡುವ.. ತೆರೆಯ ಮೇಲೆ ಪಾತ್ರಕ್ಕೆ ತಕ್ಕಂತೆ ಅಭಿನಯಿಸುವ… ಸದಾ ನಗುಮುಖದಿಂದಲೇ ನಗುವ.. ಪ್ರತಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸುವ.. ಸಮಾಜದಲ್ಲಿ ಪ್ರತಿಯಬ್ಬರ ಜೊತೆಗೆ ಬೆರೆಯುವ… ಅಪ್ಪಟ ಯುವರಾಜ ನಮ್ಮ ಪುನೀತ್ ರಾಜ್ ಕುಮಾರ್.
ಪುನೀತ್ ರಾಜ್ ಕುಮಾರ್ ಅವರ ಆಗಲಿಕೆಯ ನೋವನ್ನು ಮರೆಯಲು ಸಾಧ್ಯವಿಲ್ಲ. ಮರೆಯುವುದಕ್ಕೂ ಆಗಲ್ಲ. ತನ್ನ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಚಿತ್ರವನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.
ಮಾರ್ಚ್ 17, ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ.. ತಮ್ಮ ನೆಚ್ಚಿನ ನಟನ ಆಗಲಿಕೆಯ ನೋವಿನಲ್ಲೂ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಕರುನಾಡಿನ ಹಬ್ಬದಂತೆ ಆಚರಿಸುತ್ತಿದ್ದಾರೆ.
ಆಗಸದಲ್ಲಿ ನೂರಾರು ಸ್ಟಾರ್ ಗಳಿರಬಹುದು.. ಆದ್ರೆ ಭೂಮಿಯ ಮೇಲಿರುವುದು ಒಂದೇ ಸ್ಟಾರ್.. ಅದುವೇ ನಮ್ಮ ಪವರ್ ಸ್ಟಾರ್.. ಇದು ಅಭಿಮಾನಿಗಳು ಅಪ್ಪು ಮೇಲಿಟ್ಟಿರುವ ಪ್ರೀತಿ ಮತ್ತು ಅಭಿಮಾನ.
ಕರ್ನಾಟಕದ ಎಲ್ಲಾ ಥಿಯೇಟರ್ ಗಳ ಮುಂದೆ ಜೇಮ್ಸ್ ಚಿತ್ರದ ಅಬ್ಬರವನ್ನು ಬಣ್ಣಿಸಲು ಸಾಧ್ಯವಿಲ್ಲ. ಅಭಿಮಾನಿಗಳ ಅಭಿಮಾನವನ್ನು ಬರೆಯಲು ಪದಗಳು ಸಾಕಾಗಲ್ಲ. ಯಾಕಂದ್ರೆ 46 ವರ್ಷಗಳಲ್ಲಿ ಪುನೀತ್ ಮಾಡಿರುವ ಸಾಧನೆ, ಯಶಸ್ಸು, ಜನಪ್ರಿಯತೆ, ಪ್ರೀತಿ, ವಿಶ್ವಾಸ.
ಇದಕ್ಕೆ ಪದಗಳಲ್ಲಿ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದಕ್ಕೆ ಅನ್ನೋದು ಜೊತೆಗಿರದ ಜೀವ ಎಂದೆಂದೂ ಜೀವಂತ..! ಮಿಸ್ ಯೂ ಅಪ್ಪು.. ಎಲ್ಲಿದ್ದಿರೋ..ಹೇಗಿದ್ದಿರೋ.. ಗೊತ್ತಿಲ್ಲ. ಇವತ್ತು ಮಾರ್ಚ್ 17…ಅಂದ್ರೆ ನಿಮ್ಮ ಹುಟ್ಟು ಹಬ್ಬ.. ಹ್ಯಾಪಿ ಬರ್ತ್‍ಡೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್..!
karnataka ratna puneeth Raj Kumar birthday kannada











