ADVERTISEMENT
Monday, August 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪ್ರಚಾರದ ರಾಯಭಾರಿ.. ನಗುವಿನ ಸಾಹುಕಾರ ನಮ್ಮ ಪ್ರೀತಿಯ ಅಪ್ಪು..!

Mahesh M Dhandu by Mahesh M Dhandu
October 30, 2021
in Newsbeat, State, ರಾಜ್ಯ
Puneeth rajkumar

Puneeth rajkumar

Share on FacebookShare on TwitterShare on WhatsappShare on Telegram

ಪ್ರಚಾರದ ರಾಯಭಾರಿ.. ನಗುವಿನ ಸಾಹುಕಾರ ನಮ್ಮ ಪ್ರೀತಿಯ ಅಪ್ಪು..!

ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಗ್ದತೆ, ಸರಳತೆ, ಮಾನವೀಯತೆ, ವಿಧೇಯತೆ, ನಗುವಿನ ಆತ್ಮೀಯತೆ ಎಲ್ಲವೂ ಒಂದು ಕ್ಷಣ ಕಣ್ಣ ಮುಂದೆ ಹಾದು ಹೋಗುತ್ತದೆ.

Related posts

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

August 16, 2026
ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ!  ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ! ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

August 16, 2026

ಹೌದು, ಪುನೀತ್ ರಾಜ್ ಕುಮಾರ್, ಡಾ. ರಾಜ್ ಕುಮಾರ್ ಅವರ ಮಗ.. ನಟ, ಕಲಾವಿದ ಎಂಬುದು ಅವರ ವೈಯಕ್ತಿಕ ಜೀವನದ ಟ್ಯಾಗ್ ಲೈನ್. ತಂದೆಯ ಹಾದಿಯಲ್ಲೇ ಮುನ್ನಡೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಹಲವು ಸಾಮಾಜಿಕ ಕಳಕಳಿಯ ಮೂಲಕ ಕರುನಾಡಿನ ಜನಮನವನ್ನು ಗೆದ್ದಿದ್ದರು. ಬಾಲ ನಟನಾಗಿ ಆರು ತಿಂಗಳ ಮಗುವಾಗಿದ್ದಲೇ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಆದಾದ ನಂತರ 13 ವರ್ಷಗಳ ತನಕ ಬಾಲನಟನಾಗಿ ಕಾಣಿಸಿಕೊಂಡಿದ್ದ ಪುನೀತ್ ರಾಜ್ ಕುಮಾರ್ ತನ್ನ 10ನೇ ವರ್ಷದಲ್ಲೇ ರಾಷ್ಟ್ರ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ನಂತರ ಪುನೀತ್ ಗೆ ಯಾಕೋ ಬಣ್ಣದ ಬದುಕು ಇಷ್ಟವಾಗಲಿಲ್ಲ. ಹೀಗಾಗಿ ವ್ಯವಹಾರದ ಕಡೆ ಗಮನ ಹರಿಸಿದ್ದರು. ಆದ್ರೆ ಅಲ್ಲೂ ಕೂಡ ಪುನೀತ್ ಯಶ ಕಾಣಲಿಲ್ಲ. ಆಗ ಮತ್ತೆ ಕೈ ಹಿಡಿದಿದ್ದು ಇದೇ ಬಣ್ಣದ ಲೋಕ. 2002ರಲ್ಲಿ ಅಪ್ಪು ಸಿನಿಮಾ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡ ಪುನೀತ್ ರಾಜ್ ಕುಮಾರ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ವರ್ಷಕ್ಕೊಂದು ಸಿನಿಮಾದಲ್ಲಿ ನಟಿಸುತ್ತಲೇ ಕಳೆದ 18 ವರ್ಷಗಳಲ್ಲಿ 29 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ 30ನೇ ಸಿನಿಮಾ ತೆರೆ ಕಾಣುವ ಹಂತದಲ್ಲಿದೆ. ಆದ್ರೆ ಈಗ ಪುನೀತ್ ರಾಜ್ ಕುಮಾರ್ ಅವರೇ ಇಲ್ಲ.

ಅನಾಧ ಆಶ್ರಮ, ವೃದ್ಧಾಶ್ರಮ, ಹೆಣ್ಣು ಮಕ್ಕಳ ಶಿಕ್ಷಣ, ಗೋ ಶಾಲೆ, ಬಡ ಮಕ್ಕಳ ಶಿಕ್ಷಣ ಹೀಗೆ ಅನೇಕ ಸಂಘ ಸಂಸ್ಥೆಗಳ ಆಶ್ರಯದಾತನಾಗಿರುವ ಹೃದಯವಂತ ನಮ್ಮ ಪುನೀತ್ ರಾಜ್ ಕುಮಾರ್.

Puneet Raj Kumar saaksha tv

ಚಿತ್ರಗಳಲ್ಲಿ ಹಾಡಿರುವ ಹಾಡುಗಳ ಸಂಭಾವಣೆ, ಜಾಹಿರಾತುಗಳಲ್ಲಿ ನಟಿಸುವ ಸಂಭಾವಣೆಯ ಅರ್ಧದಷ್ಟು ಹಣವನ್ನು ದಾನ ಧರ್ಮಕ್ಕೆ ಮೀಸಲಾಗಿಡುವುದು ಪುನೀತ್ ರಾಜ್ ಕುಮಾರ್ ಧರ್ಮವಾಗಿಬಿಟ್ಟಿತ್ತು. ಇನ್ನು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಂತ ಜಾಹಿರಾತುಗಳಲ್ಲಿ ನಟಿಸಿದ್ರೆ ಅಪ್ಪು ಒಂದು ರೂಪಾಯಿ ಕೂಡ ಸಂಭಾವಣೆ ಪಡೆದುಕೊಳ್ಳುವುದಿಲ್ಲ. ಇದು ಪುನೀತ್ ರಾಜ್ ಕುಮಾರ್ ಅವರಿಗೆ ಅವರ ತಂದೆಯಿಂದ ಬಂದಂತಹ ಬಳುವಳಿ.

ಅಂದ ಹಾಗೇ ಪುನೀತ್ ರಾಜ್ ಕುಮಾರ್ ಸುಮಾರು ಹತ್ತಕ್ಕೂ ಹೆಚ್ಚು ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ರಾಯಭಾರಿಯಾಗಿದ್ದರು. ನಂದಿನಿ ಉತ್ಪನ್ನಗಳು, ಎಲ್‍ಇಡಿ ಬಲ್ಬ್ ಗಳ ಬಳಕೆ, ಕೊರೋನಾ ಲಸಿಕೆ ಅಭಿಯಾನ, ಬಿಎಮ್‍ಟಿಸಿ ಬಸ್ ಪಥದ ಅಭಿಯಾನ, ಚೆಲುವ ಚಾಮರಾಜನಗರ, ಪ್ರವಾಸೋಧ್ಯಮ, ಕೌಶಲ ಕರ್ನಾಟಕದ ಅಭಿಯಾನ, ಸಿಡಾಕ್ ತರಬೇತಿಯ ಅಭಿಯಾನ, ಗ್ರಾಮೀನ ಯುವಕರಿಗೆ ಐಟಿಐ ಸೇರುವಂತೆ ಉತ್ತೇಜನ, ಮತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಅಭಿಯಾನ, ಸ್ತ್ರೀ ಶಕ್ತಿ ಸ್ವ ಸಹಾಯದ ದೀಪ ಸಂಜೀವಿನಿ ಕಾರ್ಯಕ್ರಮ, ಸಂಜೀವಿನ ಯೋಜನೆ ಹೀಗೆ ಅನೇಕ ಸರ್ಕಾರದ ಜನ ಪರ ಕಾರ್ಯಕ್ರಮಗಳಿಗೆ ಕರ್ನಾಟಕದ ಯುವರತ್ನ ಪ್ರಚಾರದ ರಾಯಭಾರಿಯಾಗಿದ್ದರು.

ಇನ್ನು ಪುನೀತ್ ರಾಜ್ ಕುಮಾರ್ ಹಲವಾರು ಕಂಪೆನಿಗಳಿಗ ಪ್ರಚಾರದ ರಾಯಭಾರಿ ಕೂಡ ಆಗಿದ್ದರು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ ಮನೆ ಮನೆ ಮಾತಾಗಿದ್ದ ಪುನೀತ್, ಎಲ್ಲರು ಬದುಕಿನಲ್ಲಿ ಯಶಸ್ಸು, ಸಾಧನೆ ಮಾಡಬೇಕು ಎಂಬ ಧೈಯವನ್ನು ಇಟ್ಟುಕೊಂಡಿದ್ದರು. ಹೀಗೆ ಒಳ್ಳೆಯ ಮನಸ್ಸಿನ ಹೃದಯವಂತ ಇಂದು ನಮ್ಮೊಂದಿಗಿಲ್ಲ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ.

Tags: #Saaksha TVkarnatakaPuneeth Raj KumarSandalwood
ShareTweetSendShare
Join us on:

Related Posts

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

by Shwetha
August 16, 2026
0

ಬಾಗಲಕೋಟೆ: ಆರ್‌ಎಸ್‌ಎಸ್ ಹಿಂದೆಂದೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಆಗುವುದಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸವಾಲಿನ ಹೇಳಿಕೆಗೆ ರಾಜ್ಯ ಕಾಂಗ್ರೆಸ್...

ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ!  ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ! ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

by Shwetha
August 16, 2026
0

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಸೈಲೆಂಟ್ ಆಗಿದ್ದಾರೆ, ಹೈಕಮಾಂಡ್ ನಡೆ ಹಾಗೂ ಮುಂಬರುವ ರಾಜಕೀಯ ಚಟುವಟಿಕೆಗಳ ಬಗ್ಗೆ ತೀವ್ರ ಆಲೋಚನೆಯಲ್ಲಿದ್ದಾರೆ...

ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡಿಸಬೇಡಿ: ವಲಸೆ ಹೋದ ಬಡವರು ಮಂಗಳ ಗ್ರಹಕ್ಕೇನೂ ಹೋಗಿಲ್ಲ – ಚುನಾವಣಾ ಆಯೋಗದ ಎಸ್‌ಐಆರ್ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ

ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡಿಸಬೇಡಿ: ವಲಸೆ ಹೋದ ಬಡವರು ಮಂಗಳ ಗ್ರಹಕ್ಕೇನೂ ಹೋಗಿಲ್ಲ – ಚುನಾವಣಾ ಆಯೋಗದ ಎಸ್‌ಐಆರ್ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ

by Shwetha
August 16, 2026
0

ಬೆಂಗಳೂರು: "ಮತ ಚಲಾಯಿಸುವುದು ಈ ದೇಶದ ಪ್ರಜೆಯ ಮೂಲಭೂತ ಹಕ್ಕು. ಆ ಹಕ್ಕನ್ನು ಚಲಾಯಿಸಲು ನಮ್ಮನ್ನು ಚುನಾವಣಾ ಆಯೋಗದ ಅಧಿಕಾರಿಗಳ ಮುಂದೆ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ"...

ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಸತತ 2ನೇ ಬಾರಿಯೂ ಗೈರಾದ ರಾಹುಲ್ ಗಾಂಧಿ, ಖರ್ಗೆ: ರಾಷ್ಟ್ರೀಯ ಹಬ್ಬದಲ್ಲೂ ತಾರಕಕ್ಕೇರಿದ ರಾಜಕೀಯ!

ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಸತತ 2ನೇ ಬಾರಿಯೂ ಗೈರಾದ ರಾಹುಲ್ ಗಾಂಧಿ, ಖರ್ಗೆ: ರಾಷ್ಟ್ರೀಯ ಹಬ್ಬದಲ್ಲೂ ತಾರಕಕ್ಕೇರಿದ ರಾಜಕೀಯ!

by Shwetha
August 16, 2026
0

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ...

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

by Shwetha
August 16, 2026
0

ಬೆಂಗಳೂರು: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ತೀವ್ರವಾಗಿ ಕುಸಿಯಲಾರಂಭಿಸಿದ್ದು, ಇಡೀ ದೇಶವೇ ಸಾಲು ಸಾಲು ಕಠಿಣ ಸಮಸ್ಯೆಗಳಿಂದ ತೊಂದರೆಗೆ ಸಿಲುಕಿದೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram