3 ಹಾವುಗಳೊಂದಿಗೆ ಯುವಕನ ಹುಚ್ಚಾಟ!
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಘಟನೆ
ಲೈಕ್ಸ್, ಕಾಮೆಂಟ್ಸ್ ಗಾಗಿ ಯುವಕನ ಹುಚ್ಚಾಟ
ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಹಾವಿನಿಂದ ಕಚ್ಚಿಸಿಕೊಂಡ ಯುವಕ ಸಯೀದ್
ಉತ್ತರ ಕನ್ನಡ : ಯುವಕನೋರ್ವ ಹಾವುಗಳ ಜೊತೆ ಹುಚ್ಚಾಟ ಮಾಡುವುದಕ್ಕೆ ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್, ಕಾಮೆಂಟ್ಸ್ ಗಾಗಿ ಮೇಜ್ ಸಯೀದ್ ಎಂಬ ಯುವಕ ಕಾಡಿನಲ್ಲಿ ಮೂರು ನಾಗರ ಹಾವುಗಳೊಂದಿಗೆ ಹುಚ್ಚಾಟ ಆಡಿದ್ದಾನೆ.
ಆಗ ನಾಗರಹಾವು ಒಂದು ಸಯೀದ್ ಕಾಲಿಗೆ ಕಚ್ಚಿದೆ. 19 ಸೆಕೆಂಡಿನ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
19 ಸೆಕೆಂಡಿನ ವಿಡಿಯೋದಲ್ಲಿ ಯುವಕ ಮೊದಲು ಹಾವುಗಳನ್ನು ಮುಂದೆ ಇಟ್ಟುಕೊಂಡು ಕಾಲುಗಳನ್ನ ಅಲ್ಲಾಡಿಸುತ್ತಾನೆ. ಜೊತೆಗೆ ಒಂದು ಹಾವಿನ ಬಾಲವನ್ನು ತನ್ನತ್ತ ಎಳೆದುಕೊಳ್ಳುತ್ತಾನೆ.
ಈ ಹಂತದಲ್ಲಿ ಒಂದು ಹಾವು ಯುವಕನತ್ತ ನೆಗೆಯುತ್ತದೆ. ಜೊತೆಗೆ, ಕಚ್ಚಲು ಯತ್ನಿಸುತ್ತದೆ. ಆಗ ಯುವಕ ಹಾವಿನ ಕಡಿತದಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. Man stunt with three cobra horrible video goes viral







