ಮಾರ್ಚ್ 21 ಕ್ಕೆ ಅಪ್ಪಳಿಸಲಿದೆ ಈ ವರ್ಷದ ಮೊದಲ ಚಂಡಮಾರುತ
2022 ರ ಮೊದಲ ಚಂಡಮಾರುತವಾದ ಮಾರ್ಚ್ 21 ರಂದು ಅಂಡಮಾನ್ ಮತ್ತು ನಿಕೋಬಾರ್‌ಗೆ ಅಪ್ಪಳಿಸುವ ಸಾಧ್ಯತೆಯಿದೆ. ಅಸನಿ ಚಂಡಮಾರುತ ಎಂದು ಹೆಸರಿಡಲಾಗಿದೆ ಇದು ಅಂಡಮಾನ್ ದ್ವೀಪಕ್ಕೆ ಅಪ್ಪಳಿಸಿದ ನಂತರ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕಡೆಗೆ ಚಲಿಸಲಿದೆ.
ಬಂಗಾಳಕೊಲ್ಲಿಯ ಆಗ್ನೇಯ ಪ್ರದೇಶದಲ್ಲಿನ ಕಡಿಮೆ ಒತ್ತಡದ ಕಾರಣದಿಂದ ಮಾರ್ಚ್ 21 ರ ವೇಳೆಗೆ ಸೈಕ್ಲೋನಿಕ್ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಚಂಡಮಾರುತ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಮಾರ್ಚ್ 19 ರ ಶನಿವಾರ ಆಗಮಿಸಲಿದೆ.
ಆನಂತರ ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉದ್ದಕ್ಕೂ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದೆ, ಮಾರ್ಚ್ 20 ರ ಬೆಳಗಿನ ವೇಳೆಗೆ ಇದು ತೀವ್ರಗೊಳ್ಳುತ್ತದೆ ಮತ್ತು ಮಾರ್ಚ್ 21 ರಂದು ಚಂಡಮಾರುತವಾಗಿ ರೂಪಗೊಳ್ಳುತ್ತದೆ. ಮಾರ್ಚ್ 22 ರ ಬೆಳಿಗ್ಗೆ ಬಾಂಗ್ಲಾದೇಶ-ಉತ್ತರ ಮ್ಯಾನ್ಮಾರ್ ಕರಾವಳಿಯ ಬಳಿ ತಲುಪುವ ಸಾಧ್ಯತೆಯಿದೆ. ಪ್ರಸ್ತುತ ಸಮುದ್ರದ ಪರಿಸ್ಥಿತಿ ಸಾಧಾರಣದಿಂದ ಪ್ರಕ್ಷುಬ್ಧವಾಗಿದೆ.
Cyclone Asani, first in 2022, likely to hit Andaman Nicobar on March 21








