ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ಪಠಣ
ಗುಜರಾತ: ಮುಂದಿನ ಶೈಕ್ಷಣಿಕ ವರ್ಷದಿಂದ 6ರಿಂದ 12ನೇ ತರಗತಿಯವರೆಗೂ ಭಗವದ್ಗೀತೆ ಕಡ್ಡಾಯ ಮಾಡಲು ಗುಜರಾತ್ ಸರಕಾರ ತೀರ್ಮಾನಿಸಿದೆ.
ಈ ಕುರಿತು ಪ್ರತಿಕ್ರಯಿಸಿರುವ ಶಿಕ್ಷಣ ಸಚಿವ ಜಿತು ವಘಾನಿ ಶಾಲಾ-ಕಾಲೇಜುಗಳಲ್ಲಿ ಹಿಂದೂ ಧರ್ಮಗ್ರಂಥ ಭಗವದ್ಗೀತೆಯನ್ನು ಬೋಧಿಸುವುದು, ಪಠಣ ಮಾಡಲಾಗುತ್ತದೆ. ಭಗವದ್ಗೀತೆ ಎನ್ನುವುದು ಕೇವಲ ಗ್ರಂಥವಲ್ಲ. ಅದೊಂದು ಜೀವನ ವಿಧಾನ. ನಮ್ಮ ಸಂಸ್ಕೃತಿಯ ಪ್ರತೀಕ. ಇದು ಎಲ್ಲರಿಗೂ ಗೊತ್ತಾಗುವುದು ಅತ್ಯಗತ್ಯ ಎಂದು ಹೇಳಿದ್ದಾರೆ.
https://twitter.com/ANI/status/1504433001597661185?ref_src=twsrc%5Etfw%7Ctwcamp%5Etweetembed%7Ctwterm%5E1504433004751757317%7Ctwgr%5E%7Ctwcon%5Es2_&ref_url=https%3A%2F%2Fpublictv.in%2Fbhagavad-gita-made-compulsory-in-gujarat-schools-for-classes-6-to-12%2F
ಭಗವದ್ಗೀತೆಯಿಂದ ಕಲಿಯುವುದು ಬೇಕಾದಷ್ಟಿದೆ. ಹೀಗಾಗಿ ಶಾಲೆಗಳಲ್ಲಿ ಅಳವಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಎಲ್ಲರ ಮನೆಯಲ್ಲಿ ಭಗವದ್ಗೀತೆ ಇರಬೇಕು ಮತ್ತು ಪಠಣ ನಡೆಸಬೇಕು. ಕೆಲವೇ ದಿನಗಳಲ್ಲಿ ಇನ್ನಷ್ಟು ರಾಜ್ಯಗಳ ಶಾಲೆಗಳಲ್ಲಿ ಭಗವದ್ಗೀತೆ ಪಠಣವನ್ನು ಜಾರಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.








