ಒಂದೇ ವಿಚಾರಕ್ಕೆ ಬಿಜೆಪಿಯ ಇಬ್ಬರು ಸಚಿವರ ನಡುವೆ ಕಿತ್ತಾಟ
ಬೆಂಗಳೂರು: ಬೆಂಗಳೂರು ಗದ್ದುಗೆಗಾಗಿ ಬಜೆಪಿಯ ಇಬ್ಬರು ಸಚಿವರ ನಡುವೆ ವಾಕ್ಸಮರ ನಡೆದಿದೆ.
ವಿಧಾನಸಭೆಯ ಮೊಗಸಾಲೆಯಲ್ಲಿನ ಸಚಿವರ ವಿಶ್ರಾಂತಿ ಕೊಠಡಿಯಲ್ಲಿ ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಆರ್.ಅಶೋಕ್ ಮತ್ತು ಅಶ್ವಥ್ ನಾರಾಯಣ್ ನಡುವೆ ಏರುಧ್ವನಿಯಲ್ಲಿ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವಿನ ಮಾತಿನ ಚಕಮಕಿ ಕಂಡು ಕೆಲ ಶಾಸಕರು, ಆಪ್ತ ಶಾಸಕರು ಕಕ್ಕಾಬಿಕ್ಕಿಯಾಗಿದ್ದಾರೆ.
ಬೆಂಗಳೂರು ಗದ್ದುಗೆಗಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಾಲದಿಂದಲೂ ಇಬ್ಬರ ನಡುವೆ ಪೈಪೋಟಿ ಇತ್ತು. ಈಗ ಆ ಪೈಪೋಟಿ ಸ್ಪೋಟಗೊಂಡಿದೆ.
ರಾಮನಗರ ಜಿಲ್ಲೆಯ ತಹಶೀಲ್ದಾರ್ ವರ್ಗಾವಣೆಗೆ ಸಂಬಂಧಪಟ್ಟಂತೆ ಸಚಿವರಿಬ್ಬರ ನಡುವೆ ಮನಸ್ತಾಪ ಇತ್ತು ಎನ್ನಲಾಗಿದೆ. ಜಿಲ್ಲೆಯ ಒಂದು ತಾಲೂಕಿನ ತಹಶೀಲ್ದಾರ್ ವರ್ಗಾವಣೆ ಮಾಡಲು ಅಶ್ವಥ್ ನಾರಾಯಣ್ ಬಿಗಿಪಟ್ಟು ಹಿಡಿದಿದ್ದಾರೆ. ಆದರೆ ತಹಶೀಲ್ದಾರ್ ವರ್ಗಾವಣೆ ಮಾಡದೇ ಅಶೋಕ್ ಇನ್ನೊಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮೂರು ಬಾರಿ ಹೇಳಿದ್ದರು ತಹಶೀಲ್ದಾರ್ ವರ್ಗಾವಣೆ ಮಾಡಿಲ್ಲ ಎಂದು ಅಶ್ವಥ್ ನಾರಾಯಣ್ ಆಕ್ರೋಶ ಹೊರಹಾಕಿದರು
ಆತ ಬಿಜೆಪಿ ಪಕ್ಷದ ಹಿರಿಯ ನಾಯಕರೊಬ್ಬರು ಹಾಕಿಸಿರುವ ತಹಶೀಲ್ದಾರ್, ವರ್ಗಾವಣೆ ಸಾಧ್ಯವಿಲ್ಲ ಅಂತಾ ಅಶೋಕ್ ಹೇಳುತ್ತಿದ್ದಾರಂತೆ. ಆ ವರ್ಗಾವಣೆ ಕಾರಣಕ್ಕಾಗಿ ಇಬ್ಬರು ಸಚಿವರ ನಡುವೆ ವಾಕ್ಸಮರ ನಡೆದಿದೆ. ನಾನು ರಾಮನಗರ ಜಿಲ್ಲೆ ಉಸ್ತುವಾರಿ ಸಚಿವ, ನಾನು ಕೇಳಿದರು ವರ್ಗಾವಣೆ ಮಾಡಲ್ಲ ಅಂದರೆ ಹೇಗೆ…? ಅಂತ ಪ್ರಶ್ನೆ ಮಾಡಡಿದ್ದಾರೆ.








