ತೈವಾನ್ ಗಡಿಯೊಳಗೆ ನುಸುಳಿದ ಚೀನಾದ ಫೈಟರ್ ಜೆಟ್ ವಿಮಾನ
ರಷ್ಯಾ-ಉಕ್ರೇನ್ ಕದನದಿಂದ ತತ್ತರಿಸಿರುವ ಜಗತ್ತಿಗೆ ತೈವಾನ್‌ನಿಂದ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಮಾಹಿತಿಗಳ ಪ್ರಕಾರ, ಚೀನಾದ ಮಿಲಿಟರಿ ವಿಮಾನವ ಮಾರ್ಚ್ 16 ರಂದು ತೈವಾನ್‌ನ ವಾಯು ರಕ್ಷಣಾ ವಲಯಕ್ಕೆ ನುಸುಳಿ ತೈವಾನ್ ವಾಯು ಗಡಿಯನ್ನ ಉಲ್ಲಂಘಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ತೈವಾನ್ ಮೊದಲು ರೇಡಿಯೋ ಎಚ್ಚರಿಕೆಯನ್ನು ನೀಡಿತು ಮತ್ತು ನಂತರ ತನ್ನ ವಾಯು ರಕ್ಷಣಾ ಕ್ಷಿಪಣಿಗಳನ್ನು ನಿಯೋಜಿಸಿತ್ತು. ಇದು ಒಂದು ತಿಂಗಳ ಅವಧಿಯಲ್ಲಿ ತೈವಾನ್‌ನೊಳಗೆ ಚೀನಾದ 12 ನೇ ಅತಿಕ್ರಮಣವಾಗಿದೆ.
ಬುಧವಾರ, ಚೀನಾದ ಜೆ-16 ಫೈಟರ್ ಜೆಟ್ ತೈವಾನ್‌ನ ವಾಯು ರಕ್ಷಣಾ ಗುರುತಿನ ವಲಯದ (ಎಡಿಐಜೆಡ್) ನೈಋತ್ಯ ಪ್ರದೇಶವನ್ನು ಪ್ರವೇಶಿಸಿದೆ ಎಂದು ತೈವಾನ್ ಮಾಧ್ಯಮಗಳು ರಾಷ್ಟ್ರೀಯ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿವೆ. ಈ ತಿಂಗಳು ಇಲ್ಲಿಯವರೆಗೆ, 26 ಫೈಟರ್ ಜೆಟ್‌ಗಳು, 9 ಸ್ಪಾಟರ್ ವಿಮಾನಗಳು ಮತ್ತು ಮೂರು ಹೆಲಿಕಾಪ್ಟರ್‌ಗಳು ಸೇರಿದಂತೆ ತೈವಾನ್‌ನ ವಾಯು ವಲಯದಲ್ಲಿ 38 ಚೀನೀ ಮಿಲಿಟರಿ ವಿಮಾನಗಳನ್ನು ಟ್ರ್ಯಾಕ್ ಮಾಡಲಾಗಿದೆ.
ವಾಯು ರಕ್ಷಣಾ ವಲಯ ಎಂದರೇನು?
ಏರ್ ಡಿಫೆನ್ಸ್ ಐಡೆಂಟಿಫಿಕೇಶನ್ ಝೋನ್ ಎಂಬುದು ಒಂದು ದೇಶದಿಂದ ನಿಯಂತ್ರಿಸಲ್ಪಡುವ ಪ್ರದೇಶವಾಗಿದ್ದು ಅದು ತನ್ನ ವಾಯುಪ್ರದೇಶವನ್ನು ಮೀರಿ ವಿಸ್ತರಿಸುತ್ತದೆ. ಈ ವಲಯಕ್ಕೆ ಬರುವ ವಿಮಾನಗಳು ತಮ್ಮ ಗುರುತನ್ನು ಏರ್ ಟ್ರಾಫಿಕ್ ಕಂಟ್ರೋಲರ್‌ಗಳೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ತೈವಾನ್‌ನೊಂದಿಗೆ ದೇಶದ ಪುನರೇಕೀಕರಣದ ಕನಸು ಶೀಘ್ರದಲ್ಲೇ ಈಡೇರಲಿದೆ ಎಂದು ಘೋಷಿಸಿದರು. ಅಂದಿನಿಂದ, ತೈವಾನ್ ಅನ್ನು ಬೆದರಿಸಲು ಚೀನಾ ಆಗಾಗ್ಗೆ ತನ್ನ ಗಡಿಯೊಳಗೆ ತನ್ನ ಯುದ್ಧ ವಿಮಾನಗಳನ್ನು ಹಾರಿಸುತ್ತಿದೆ.
ಚೀನಾದ ವಿಮಾನಗಳು ಸಾಮಾನ್ಯವಾಗಿ ತೈವಾನ್‌ನ ನೈಋತ್ಯದ ವಾಯುಪ್ರದೇಶವನ್ನು ನುಸುಳುತ್ತವೆ. 1949 ರಲ್ಲಿ ನಡೆದ ಅಂತರ್ಯುದ್ಧದ ಸಮಯದಲ್ಲಿ ತೈವಾನ್ ಮತ್ತು ಚೀನಾ ಬೇರ್ಪಟ್ಟವು, ಆದರೆ ಚೀನಾ, ದ್ವೀಪದ ಮೇಲೆ ಹಕ್ಕು ಸಾಧಿಸುವುದನ್ನು ಮುಂದುವರೆಸಿದೆ. ಪರಿಣಾಮವಾಗಿ, ಬೀಜಿಂಗ್ ತೈವಾನ್ ಸರ್ಕಾರದ ಪ್ರತಿಯೊಂದು ಕ್ರಮವನ್ನು ವಿರೋಧಿಸುತ್ತದೆ. ತೈವಾನ್ ಅನ್ನು ಪ್ರತ್ಯೇಕಿಸಲು ಮತ್ತು ಬೆದರಿಸಲು ಇದು ರಾಜತಾಂತ್ರಿಕ ಮತ್ತು ಮಿಲಿಟರಿ ಬಲವನ್ನು ಬಳಸುವುದನ್ನು ಮುಂದುವರೆಸಿದೆ.
China infiltrated again in Taiwan’s territory: Chinese aircraft entered the Air Defense Zone








