The Kashmir Files | ಪ್ರಧಾನಿ ಮೋದಿಗೆ ಸವಾಲಾಕಿದ ಬಾಲಿವುಡ್ ನಿರ್ದೇಶಕ
ಬಾಲಿವುಡ್: ಮಾರ್ಚ 11 ರಂದು ತೆರೆಕಂಡ ದಿ ಕಾಶ್ಮೀರ ಫೈಲ್ಸ್ ದೇಶದ್ಯಾಂತ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪರ ವಿರೋಧದ ಕಾಮೆಂಟ್ ಗಳು ಬರುತ್ತಿದ್ದು, ಈಗ ಕಾಶ್ಮೀರ ಫೈಲ್ಸ್ ರೀತಿ ಗುಜರಾತ್ ಫೈಲ್ಸ್ ಜಿತ್ರ ನಿರ್ಮಿಸಲು ನಿರ್ದೇಶಕ ವಿನೋದ್ ಕಾಪ್ರಿ ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿರುವ ಬಾಲಿವುಡ್ ನಿರ್ದೇಶಕ ವಿನೋದ್ ಕಾಪ್ರಿ, ನಾನು ಗುಜರಾತ್ ಫೈಲ್ ಸಿನಿಮಾ ಮಾಡಲು ತಯಾರಿ ಮಾಡಿಕೊಂಡಿದ್ದೇನೆ. ಈ ಕುರಿತು ನಿರ್ಮಾಪಕರ ಜತೆ ಮಾತುಕತೆ ಕೂಡ ಆಗಿದೆ. ಈ ಸಿನಿಮಾದಲ್ಲಿ ಪ್ರಧಾನಿ ಮೋದಿ ಅವರ ಪಾತ್ರವು ವಿವರವಾಗಿ ಇರಲಿದೆ. ಈ ಚಿತ್ರವನ್ನು ತಾವು ತಡೆಯುವುದಿಲ್ಲ ಎಂದು ರಾಷ್ಟ್ರಕ್ಕೆ ಭರವಸೆ ಕೊಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿರ್ದೇಶಕ ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ, “ದಿ ಗುಜರಾತ್ ಫೈಲ್ಸ್ ಸತ್ಯ ಘಟನೆಯನ್ನೇ ಆಧರಿಸಿದ್ದು ಆಗಿರುತ್ತದೆ. ಅದಕ್ಕಾಗಿ ನಾನೂ ಕೂಡ ಸಂಶೋಧನೆ ಮಾಡಿದ್ದೇನೆ. ಸತ್ಯ ಮತ್ತು ಪ್ರಾಮಾಣಿಕವಾಗಿ ಈ ಸಿನಿಮಾ ಮಾಡುವೆ. ಪ್ರಧಾನಿ ಅವರು ಹೇಳುವಂತೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವು ನನಗೂ ಬೇಕು. ಅದನ್ನು ಪ್ರಧಾನಿಗಳು ನಮ್ಮ ಚಿತ್ರಕ್ಕೂ ಕೊಟ್ಟರೆ ಅತೀ ಶೀಘ್ರದಲ್ಲೇ ಈ ಸಿನಿಮಾ ಶುರು ಮಾಡುವುದಾಗಿ ಅವರು ಟ್ವಿಟ್ ಮಾಡಿದ್ದಾರೆ.
ನ್ಊ ನಿರ್ದೇಶಕ ವಿನೋದ್ ಕಾಪ್ರಿ ಮಾಡಿರುವ ಈ ಟ್ವೀಟ್ ಭಾರೀ ವೈರಲ್ ಆಗಿದೆ. ಅಲ್ಲದೇ, ಅವರು ಕೇಳಿರುವ ಪ್ರಶ್ನೆಯನ್ನು ವಿನೋದ್ ಬೆಂಬಲಿಗರು ಕೇಳಿದ್ದಾರೆ.









