VIRAT ವಿಕೆಟ್ ಪಡೆಯೋದು ನನ್ನ ಟಾರ್ಗೆಟ್
ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆಯೋದು ನನ್ನ ಗುರಿ ಎಂದು ಟೀಂ ಇಂಡಿಯಾದ ಯಂಗ್ ಬೌಲರ್ ಚೇತನ್ ಸಕಾರಿಯಾ ತಿಳಿಸಿದ್ದಾರೆ.
ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೇತನ್ ಸಕಾರಿಯಾ ಅವರನ್ನ 4.2 ಕೋಟಿ ರೂಪಾಯಿಗೆ ಖರೀದಿಸಿದೆ.
ಕಳೆದ ವರ್ಷ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಪದಾರ್ಪಣೆ ಮಾಡಿದ್ದ ಸಕಾರಿಯಾ ಮಿಂಚು ಹರಿಸಿದ್ದಾರೆ.
ಐಪಿಎಲ್-2021ರಲ್ಲಿ ಸಕಾರಿಯಾ 14 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿದ್ದರು. ಅವರ ಈ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಪ್ರವೇಸಿದರು.
ಕಳೆದ ವರ್ಷ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಚೇತನ್ ಸಕಾರಿಯಾ T20I ಗೆ ಪಾದಾರ್ಪಣೆ ಮಾಡಿದ್ದರು.
ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಸಕಾರಿಯಾ ಕಣಕ್ಕಿಳಿಯಲಿದ್ದು, ಐಪಿಎಲ್ ನಲ್ಲಿ ತಮ್ಮ ಚೊಚ್ಚಲ ಪಂದ್ಯದ ಬಗ್ಗೆ ಮಾತನಾಡಿದ್ದಾರೆ. ನನ್ನ ಚೊಚ್ಚಲ ಪಂದ್ಯದಲ್ಲಿ ನಾನು ಧೋನಿ ಅವರನ್ನ ಕ್ಲೀನ್ ಬೋಲ್ಡ್ ಮಾಡಿದೆ. ಇದು ನನ್ನ ಜೀವನದ ಅತ್ಯುತ್ತಮ ಕ್ಷಣವಾಗಿದೆ ಎಂದಿದ್ದಾರೆ.
ಧೋನಿ ಭಾಯ್ ವಿಕೆಟ್ ಪಡೆಯೋದು ಹೆಚ್ಚೇನೂ ಅಲ್ಲ. ಅವರು ಆಟದಲ್ಲಿ ಲೆಜೆಂಡ್. ಒಬ್ಬ ಲೆಜೆಂಡರಿ ಆಟಗಾರನಿಗೆ ಬೌಲಿಂಗ್ ಮಾಡೋದು ಖುಷಿಯ ವಿಚಾರವಾಗಿದೆ.
ನಾನು ಪಂದ್ಯ ಮತ್ತು ನೆಟ್ಸ್‌ನಲ್ಲಿ ಡಿವಿಲಿಯರ್ಸ್‌ಗೆ ಬೌಲಿಂಗ್ ಮಾಡಿದ್ದೇನೆ. ಡೆತ್ ಓವರ್‌ಗಳಲ್ಲಿ ಅವರು ಎಲ್ಲಾ ರೀತಿಯ ಹೊಡೆತಗಳನ್ನು ಆಡುತ್ತಾರೆ. ಹಾಗಾಗಿ ಅವರಿಗೆ ಬೌಲಿಂಗ್ ಮಾಡುವುದು ತುಂಬಾ ಕಷ್ಟ.
ನಾನು ಡೆವಿಲಿಯರ್ಸ್ ವಿಕೆಟ್ ಪಡೆಯಬೇಕು ಎಂದುಕೊಂಡಿದ್ದೆ, ಆದ್ರೀಗ ಅವರ ವಿದಾಯ ಘೋಷಿಸಿದ್ದಾರೆ. ಆದರೆ ಐಪಿಎಲ್-2022 ರಲ್ಲಿ ವಿರಾಟ್ ಭಾಯ್ ವಿಕೆಟ್ ಪಡೆಯಬೇಕೆಂಬುದು ನನ್ನ ಟಾರ್ಗೆಟ್ ಎಂದಿದ್ದಾರೆ ಚೇತನ್ ಸಕಾರಿಯಾ.
Virat bhai is one batsman I would like to dismiss in IPL 2022: Chetan Sakariya









