ROHIT SHARMA ಆಸ್ಟ್ರೇಲಿಯದಲ್ಲಿ ಗೆಲ್ಲಲಿ ನೋಡೋಣ
ಟೀಂ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಮಿಂಚು ಹರಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಇತ್ತೀಚೆಗೆ ತವರು ನೆಲದಲ್ಲಿ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಗ್, ರೋಹಿತ್ ಶರ್ಮಾ ಬಗ್ಗೆ ಕೆಲ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ.
ರೋಹಿತ್ ತಮ್ಮ ನಾಯಕತ್ವದ ವೃತ್ತಿಜೀವನವನ್ನು ಅದ್ಭುತವಾಗಿ ಆರಂಭಿಸಿದ್ದಕ್ಕಾಗಿ ಬ್ರಾಡ್ ಹಾಗ್ ಶ್ಲಾಘಿಸಿದ್ದಾರೆ.
ಆದರೆ, ಆಸ್ಟ್ರೇಲಿಯಾದಂತಹ ಅಗ್ರ ತಂಡಗಳೊಂದಿಗೆ ಆಡಿದಾಗ ರೋಹಿತ್ ಅವರ ನಾಯಕತ್ವದ ಕೌಶಲ್ಯವು ಹೊರಬರುತ್ತದೆ.
ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ರೋಹಿತ್ಗೆ ದೊಡ್ಡ ಸವಾಲಾಗಿದೆ ಎಂದಿದ್ದಾರೆ.
ಭಾರತ ಶೀಘ್ರದಲ್ಲೇ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ಗಳ ಸರಣಿಯನ್ನು ಆಡಲಿದೆ. ಇದು ರೋಹಿತ್ ಶರ್ಮಾಗೆ ಕಠಿಣ ಸವಾಲಾಗಿದೆ.
ಈ ಸರಣಿಯಲ್ಲಿ ರೋಹಿತ್ ಶರ್ಮಾ ಹೇಗೆ ಇರಲಿದ್ದಾರೆ ಅನ್ನೋದನ್ನ ನಾನು ನೋಡಲು ಬಯಸುತ್ತೇನೆ ಎಂದಿದ್ದಾರೆ ಹಾಗ್.
ಇನ್ನು ಭಾರತ ತಂಡ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ, ಇಂಗ್ಲೆಂಡ್ ಪ್ರವಾಸ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಪಾಲ್ಗೊಳ್ಳುತ್ತಿದೆ. ಹೀಗಾಗಿ ಮುಂಬರುವ ಎಲ್ಲಾ ಟೂರ್ನಿಗಳು ರೋಹಿತ್ಗೆ ಕಠಿಣವಾಗಿವೆ ಎಂದು ಹಾಗ್ ಹೇಳಿದ್ದಾರೆ.









