VIRAT KOHLI ಇನ್ನಿಂಗ್ಸ್ ಓಪನ್ ಮಾಡಬಾರದು
ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಬದಲಾಗಿ ಒನ್ ಡೌನ್ ನಲ್ಲಿ ಬ್ಯಾಟಿಂಗ್ ಗೆ ಬರಬೇಕು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಓಪನರ್ ಆಗಿ ಬಂದು ವಿಫಲರಾಗಿದ್ದರು. ಕಳೆದ ಬಾರಿ ಆಡಿದ 14 ಪಂದ್ಯಗಳಲ್ಲಿ ಕೊಹ್ಲಿ 405 ರನ್ ಗಳನ್ನು ಗಳಿಸಿದ್ದರು.
ಹೀಗಾಗಿ ಈ ವಿಚಾರವಾಗಿ ಮಾತನಾಡಿರುವ ಆಕಾಶ್ ಚೋಪ್ರಾ, ಎಬಿಡಿ ವಿಲಿಯರ್ಸ್ ನಿವೃತ್ತಿಯಾಗಿರುವುದರಿಂದ ಕೊಹ್ಲಿ ಮೇಲೆ ಒತ್ತಡ ಹೆಚ್ಚಿದೆ.
ಕಳೆದ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದ್ದಾಗ ಮೂರನೇ ಸ್ಥಾನಕ್ಕಾಗಿ ಮ್ಯೂಸಿಕಲ್ ಚೇರ್ಸ್ ಆಟವನ್ನು ಆಡಿದ್ರು.
ಶ್ರೀಕರ್ ಭರತ್ ಕೆಲವು ಪಂದ್ಯಗಳಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಗೆ ಬಂದ್ರೆ ಕೆಲವು ಪಂದ್ಯಗಳಿಗೆ ಗ್ಲೆನ್ ಮ್ಯಾಕ್ಸ್ ವೆಲ್ ಬಂದರು.
ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದರು.
ಈ ಋತುವಿನ ಪ್ರಮುಖ ಆಟಗಾರರನ್ನು ಮೊದಲು ಬ್ಯಾಟಿಂಗ್ ಗೆ ಕಳುಹಿಸಬೇಕು. ಇನ್ನು ಡಿವಿಲಿಯರ್ಸ್ ತಂಡದಲ್ಲಿ ಇಲ್ಲ.
ಅವರು ತಂಡದಲ್ಲಿದ್ದಾಗ ಪರಿಸ್ಥಿತಿಗೆ ಅನುಗುಣವಾಗಿ ನಾಲ್ಕು ಅಥವಾ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು.
ಆದರೆ, ದಿನೇಶ್ ಕಾರ್ತಿಕ್ ತಂಡಕ್ಕೆ ಬಂದಿದ್ದಾರೆ. ಆದರೆ ಎಬಿಡಿ ಸ್ಥಾನವನ್ನು ಕಾರ್ತಿಕ್ ತುಂಬಲು ಸಾಧ್ಯವಿಲ್ಲ.
ಒನ್ ಡೌನ್‌ನಲ್ಲಿ ಸ್ಥಿರ ಆಟಗಾರನ ಅಗತ್ಯವಿದೆ. ಹಾಗಾಗಿ ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಬ್ಯಾಟಿಂಗ್ ಗೆ ಬಂದರೆ ತಂಡಕ್ಕೆ ತುಂಬಾ ಉಪಯುಕ್ತವಾಗಲಿದೆ ಎಂದು ಚೋಪ್ರಾ ಹೇಳಿದ್ದಾರೆ. aakash-chopra-pick-virat-kohli-batting-spot









