Pant Urvashi | ಹೀರೋಯಿನ್ ಗಾಗಿ 16 ಗಂಟೆ ಕಾದುಕುಳಿತ ಪಂತ್..!!
ಬಾಲಿವುಡ್ ಮತ್ತು ಕ್ರಿಕೆಟ್ ಲೋಕಕ್ಕೆ ಬಿಡಿಸಲಾಗದ ನಂಟಿದೆ. ಬಾಲಿವುಡ್ ನಾಯಕಿಯರು, ಕ್ರಿಕೆಟಿಗರು ಮತ್ತು ಉದ್ಯಮಿಗಳೊಂದಿಗೆ ಡೇಟಿಂಗ್ ಮಾಡಿ ನಂತರ ಮದುವೆಯಾಗುವುದನ್ನು ನಾವು ನೋಡಿದ್ದೇವೆ.
ಕೆಲವು ಸೆಲೆಬ್ರಿಟಿಗಳ ಪ್ರೀತಿ ಮತ್ತು ಮದುವೆ ಗಾಸಿಪ್‌ಗಳು ಕೂಡ ಹರಿದಾಡುತ್ತಲೇ ಇರುತ್ತದೆ.
ಏತನ್ಮಧ್ಯೆ, ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ ಕಳೆದ ಕೆಲವು ದಿನಗಳಿಂದ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.
ಊರ್ವಶಿ ರೌಟೇಲಾ ಅವರನ್ನು ಭೇಟಿ ಮಾಡಲು ರಿಷಬ್ ಪಂತ್ ಸುಮಾರು 16 ಗಂಟೆಗಳ ಕಾಲ ಕಾದಿದ್ದರಂತೆ.
ಊರ್ವಶಿ ತಮ್ಮ ಸಿನಿಮಾ ಪ್ರಾಜೆಕ್ಟ್ ಒಂದಕ್ಕೆ ವಾರಣಾಸಿಯಲ್ಲಿ ಶೂಟಿಂಗ್ ಮಾಡುತ್ತಿದ್ದರು.
ಆಗ ಊರ್ವಶಿ ಟೈಟ್ ಶೆಡ್ಯೂಲ್ ನಲ್ಲಿದ್ದರು. ಈ ವಿಷಯವನ್ನು ತಿಳಿದ ರಿಷಬ್ ಊರ್ವಶಿಯನ್ನು ಭೇಟಿ ಮಾಡಲು ಹೋಗಿದ್ದರಂತೆ.
ಬಿಟೌನ್ ಮೂಲಗಳ ಪ್ರಕಾರ ರಿಷಭ್ ಆಕೆಗಾಗಿ ಸುಮಾರು 16-17 ಗಂಟೆಗಳ ಕಾಲ ಕಾದಿದ್ದರಂತೆ.
ಆದ್ರೆ ಇವರಿಬ್ಬರು ಒಟ್ಟಿಗೆ ಇರುವ ಒಂದೇ ಒಂದು ಫೋಟೋ ಕೂಡ ಇನ್ನೂ ಹೊರಬಂದಿಲ್ಲ. Rishabh Pant Urvashi Rautela love









