ಈ ಸಲ ಕಪ್ ನಮ್ದೆ ಎಂದ ಉಮೇಶ್ ಯಾದವ್…!!!
ಕೊಲ್ಕತ್ತಾ ನೈಟ್ ರೈಸರ್ಸ್ ತಂಡಕ್ಕೆ ಮತ್ತೆ ವಾಪಸ್ ಆಗಿದ್ದಕ್ಕೆ ತುಂಬಾ ಖುಷಿಯಾಗಿದೆ. ಈ ಬಾರಿ ಕಪ್ ಗೆಲ್ಲೋದೆ ನಮ್ಮ ಗುರಿ ಎಂದು ವೇಗಿ ಉಮೇಶ್ ಯಾದವ್ ಹೇಳಿದ್ದಾರೆ.
ಈ ಬಾರಿಯ ಮೆಗಾ ಹರಾಜಿನ ಭಾಗವಾಗಿ ಉಮೇಶ್ ಯಾದವ್ ಅವರನ್ನ ಕೆಕೆಆರ್ ಫ್ರಾಂಚೈಸಿ, 2 ಕೋಟಿಗೆ ಖರೀದಿ ಮಾಡಿದೆ.
ಈ ಹಿಂದೆ 2014ರಲ್ಲಿ ಉಮೇಶ್ ಯಾದವ್, ಕೆಕೆಆರ್ ಪರ ಆಡಿದ್ದರು. ಆಗ ಕೆಕೆಆರ್ ಚಾಂಪಿಯನ್ ಆಗಿತ್ತು.
ಇದೀಗ ಮತ್ತೆ ಕೆಕೆಆರ್ ಪಾಳಯ ಸೇರಿಕೊಂಡಿರುವ ಉಮೇಶ್ ಯಾದವ್ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ಮತ್ತೆ ಕೆಕೆಆರ್ ತಂಡಕ್ಕೆ ವಾಪಸ್ ಆಗಿರುವುದು ಖುಷಿಯಾಗಿದೆ. 2014 ರಲ್ಲಿ ನಾವು ಟ್ರೋಫಿ ಗೆದ್ದಿದ್ದೇವು.
ಆಗ ನಾನು ತಂಡದ ಭಾಗವಾಗಿದ್ದೆ. ಕೆಕೆಆರ್ ನನ್ನ ಪಾಲಿಗೆ ಅದೃಷ್ಟದ ತಂಡ.
ಇನ್ನು ನನ್ನ ಫಿಟ್ನೆಸ್ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ನಾನು ಚೆನ್ನಾಗಿದ್ದೇನೆ. ಹಾಗಾಗಿ ಈ ಸೀಸನ್‌ಗಾಗಿ ಎದುರು ನೋಡುತ್ತಿದ್ದೇವೆ.
ಕೆಕೆಆರ್ ತಂಡಕ್ಕಾಗಿ ನನ್ನ ಕೆಲಸ ನಾನು ಮಾಡ್ತೀನಿ.
ಮತ್ತೊಮ್ಮೆ ಕೆಕೆಆರ್ ಗಾಗಿ ಟ್ರೋಫಿ ಗೆಲ್ಲುವುದು ನನ್ನ ಗುರಿಯಾಗಿದೆ ಎಂದು ಉಮೇಶ್ ತಿಳಿಸಿದ್ದಾರೆ.
IPL-2022 ಮಾರ್ಚ್ 26 ರಂದು ಪ್ರಾರಂಭವಾಗಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಮೊದಲ ಪಂದ್ಯವನ್ನು ಮಾರ್ಚ್ 26 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.
kkr-my-lucky-team-umesh-yadav