ADVERTISEMENT
Sunday, July 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Siddaramaiah: ಜಗದೀಶ್ ಶೆಟ್ಟರ್ ಯಾಕೆ ಸಂಪುಟ ಸೇರಲಿಲ್ಲ. ಬಣಗಳು ಇರುವುದು ಬಿಜೆಪಿಯಲ್ಲಿ : ಸಿದ್ದರಾಮಯ್ಯ

Vivek Biradar by Vivek Biradar
March 20, 2022
in Newsbeat, Politics, ರಾಜಕೀಯ
Siddaramaiah Saaksha Tv
Share on FacebookShare on TwitterShare on WhatsappShare on Telegram

ಜಗದೀಶ್ ಶೆಟ್ಟರ್ ಯಾಕೆ ಸಂಪುಟ ಸೇರಲಿಲ್ಲ. ಬಣಗಳು ಇರುವುದು ಬಿಜೆಪಿಯಲ್ಲಿ : ಸಿದ್ದರಾಮಯ್ಯ

ಹುಬ್ಬಳ್ಳಿ: ಭಗವದ್ಗೀತೆ ಬಗ್ಗೆ ನಮ್ಮದು ಯಾವುದೇ ವಿರೋಧ ಇಲ್ಲ. ಸಂವಿಧಾನದ ಪ್ರಕಾರ ಮಾಡಲಿ, ಸಂವಿಧಾನ ಧರ್ಮ ನಿರಪೇಕ್ಷತೆ ಬಗ್ಗೆ ಹೇಳುತ್ತದೆ. ಜಾತ್ಯಾತೀತ ಮನೋಭಾವ ಬೆಳೆಯಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

Related posts

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

SIRಗೆ ಸರ್ಕಾರ ಯಾರಿಗೂ ಒತ್ತಾಯ ಮಾಡುತ್ತಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

July 5, 2026
ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

July 5, 2026

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಜರಾತ್‍ನಲ್ಲಿ ಭಗವದ್ಗೀತೆ ಪಠ್ಯದಲ್ಲಿ ಸೇರಿಸಲು ಕ್ರಮ ತೀರ್ಮಾನ ತೆಗೆದುಕೊಂಡಿದ್ದಾರೆ. ಮಕ್ಕಳಿಗೆ ನೈತಿಕ ಶಿಕ್ಷಣ ಬೇಕು, ಅದರ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಸಹ ಕೊಡಬೇಕು ಎಂದು ಒತ್ತಾಯಿಸಿದರು.

ಅಲ್ಲದೇ ಎಲ್ಲರೂ ರಾಹುಲ್ ಹಾಗೂ ಸೋನಿಯಾ ಗಾಂಧಿ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಪಕ್ಷ ಬಲಪಡಿಸುವ ಬಗ್ಗೆ ಸಿಡಬ್ಲೂಸಿ ಸಭೆಯಲ್ಲಿ ಚರ್ಚೆಯಾಗಿದೆ. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದಾರೆ. ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ಧವಾಗಿದೆ. ಯಾವಾಗ ಚುನಾವಣೆ ನಡೆದರೂ ನಾವು ರೆಡಿ. ಚುನಾವಣೆಗೆ ಇನ್ನೂ ಒಂದು ವರ್ಷ ಸಮಯವಿದೆ. ಪಕ್ಷ ಸಂಘಟನೆ ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಹೇಳಿದರು.

jagadish shettar

ಹಾಗೇ ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ಯಾವಾಗಲಾದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದ್ಯಾ? 2008, 2018ರಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬಹುದು, ಆದರೆ ಆಪರೇಷನ್ ಕಮಲ ಮಾಡಿನೇ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಲಿದೆ. ಜಗದೀಶ್ ಶೆಟ್ಟರ್ ಮಾತಿಗೆ ಯಾವ ಕಿಮ್ಮತ್ತು ಇಲ್ಲ. ಅವರು ಸಿಎಂ ಆಗಿದ್ದಾಗ ಎಷ್ಟು ಸೀಟು ಬಂತು ಗೊತ್ತಿಲ್ವಾ ಎಂದು ಕಾಲೆಳೆದರು.

ಸಿಎಂ ಆಕಾಂಕ್ಷಿಗಳು ಇರುವುದು ತಪ್ಪಾ? ಅಂತಿಮವಾಗಿ ಯಾರು ಸಿಎಂ ಆಗಬೇಕು ಎನ್ನುವುದು ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿಯಲ್ಲಿ ಯಾವುದೇ ಜಗಳ ಇಲ್ವಾ? ಯತ್ನಾಳ್ ಏನು ಮಾಡುತ್ತಿದ್ದಾರೆ, ಜಗದೀಶ್ ಶೆಟ್ಟರ್ ಯಾಕೆ ಸಂಪುಟ ಸೇರಲಿಲ್ಲ. ಬಣಗಳು ಇರುವುದು ಬಿಜೆಪಿಯಲ್ಲಿ, ಆದರೆ ನಮ್ಮಲ್ಲಿ ಯಾವುದೇ ಬಣ ಇಲ್ಲ. ನಮ್ಮಲ್ಲಿ ಇರುವುದು ಒಂದೇ ಬಣ ಅದು ಸೋನಿಯಾ ಗಾಂಧಿ ಬಣ. ಬಿಜೆಪಿಯಲ್ಲಿ ಕಾಂಗ್ರೆಸ್‍ನಿಂದ ಹೋದವರು, ಆರ್‌ಎಸ್‌ಎಸ್‌ನವರು, ಜೆಡಿಯುನಿಂದ ಹೋದವರು ಎಂದು ಟೀಕಿಸಿದರು.

Tags: #Saaksha TVBJPJagadish ShettarRahul GnadhiSiddaramaiahsonia gandhi
ShareTweetSendShare
Join us on:

Related Posts

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

SIRಗೆ ಸರ್ಕಾರ ಯಾರಿಗೂ ಒತ್ತಾಯ ಮಾಡುತ್ತಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

by Shwetha
July 5, 2026
0

SIR ಪ್ರಕ್ರಿಯೆಯಲ್ಲಿ ಲೋಪಗಳಾಗುತ್ತಿವೆ ಎಂಬ ವಿಪಕ್ಷಗಳ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಮೀರಿ ಯಾರೂ ಏನನ್ನೂ ಮಾಡಲು...

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

by Shwetha
July 5, 2026
0

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು ಮತ್ತು ನಾಳೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,...

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

by Shwetha
July 5, 2026
0

ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಇತಿಹಾಸ ಮತ್ತು ಪರಂಪರೆಗೆ ಧಕ್ಕೆ ತರುವಂತಹ ಯಾವುದೇ ಹೊಸ ಪ್ರಯೋಗಗಳನ್ನು ಮಾಡಬೇಡಿ ಎಂದು ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್...

ಡಿಕೆಶಿ ಕಾಲ್ಗುಣಕ್ಕೇ ರಾಜ್ಯಕ್ಕೆ ಬಂತು ಭೀಕರ ಬರ:ಬರಗಾಲದಲ್ಲೂ ಬೆಂಗಳೂರು ಬಿಟ್ಟು ಕದಲದ ಮಂತ್ರಿಗಳು: ಸರ್ಕಾರದ ಬೇಜವಾಬ್ದಾರಿತನಕ್ಕೆ ಅಶೋಕ್ ಆಕ್ರೋಶ

ಡಿಕೆಶಿ ಕಾಲ್ಗುಣಕ್ಕೇ ರಾಜ್ಯಕ್ಕೆ ಬಂತು ಭೀಕರ ಬರ:ಬರಗಾಲದಲ್ಲೂ ಬೆಂಗಳೂರು ಬಿಟ್ಟು ಕದಲದ ಮಂತ್ರಿಗಳು: ಸರ್ಕಾರದ ಬೇಜವಾಬ್ದಾರಿತನಕ್ಕೆ ಅಶೋಕ್ ಆಕ್ರೋಶ

by Shwetha
July 5, 2026
0

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟು ಅನ್ನದಾತರು ಕಂಗಾಲಾಗಿರುವ ಬೆನ್ನಲ್ಲೇ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ, ಅದರಲ್ಲೂ ವಿಶೇಷವಾಗಿ...

ಮುದ್ದೆ ಚಪಾತಿಗೆ ಮಸ್ತ್ ಕಾಂಬಿನೇಷನ್- ಹೊಟೇಲ್ ಶೈಲಿಯ ಮಟನ್ ಗ್ರೇವಿ : ಬ್ಯಾಚುಲರ್ಸ್ ರೆಸಿಪಿ ಒಮ್ಮೆ ಟ್ರೈ ಮಾಡಿ

ಮುದ್ದೆ ಚಪಾತಿಗೆ ಮಸ್ತ್ ಕಾಂಬಿನೇಷನ್- ಹೊಟೇಲ್ ಶೈಲಿಯ ಮಟನ್ ಗ್ರೇವಿ : ಬ್ಯಾಚುಲರ್ಸ್ ರೆಸಿಪಿ ಒಮ್ಮೆ ಟ್ರೈ ಮಾಡಿ

by Shwetha
July 5, 2026
0

ಮಟನ್ ಅಡುಗೆ ಮಾಡುವುದು ಎಂದರೆ ದೊಡ್ಡ ಕೆಲಸ ಎಂಬ ಭಾವನೆ ಅನೇಕರಲ್ಲಿದೆ. ಅದರಲ್ಲೂ ಬ್ಯಾಚುಲರ್ ಆಗಿರುವವರಿಗೆ ಅಥವಾ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡದವರಿಗೆ ಮಟನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram