ಯುವರಾಜ್ ಸಿಂಗ್ … ಸದಾ ಹಾಸ್ಯ ಪ್ರಜ್ಞೆಯ ಕ್ರಿಕೆಟಿಗ. ಮೈದಾನದಲ್ಲಿ ಸದಾ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಯುವಿ ಎದುರಾಳಿ ತಂಡಗಳ ಆಟಗಾರರು ಕೂಡ ಹೆಚ್ಚು ಪ್ರೀತಿಸುವ ಕ್ರಿಕೆಟಿಗ. ಲಘು ಹಾಸ್ಯ ಮಿಶ್ರಿತ ಮಾತು, ನಗುಮುಖದಿಂದಲೇ ಇರುವಂತಹ ಯುವರಾಜ್ ತಮ್ಮ ಒಡನಾಡಿಗಳಿಗೆ ಕೀಟಲೆ ಮಾಡುತ್ತಿದ್ದರು. ಡ್ರೆಸಿಂಗ್ ರೂಮ್, ಮೈದಾನದಲ್ಲಿ ಕೂಡ ಸಹ ಆಟಗಾರರಿಗೆ ಕಿಂಡಲ್ ಮಾಡ್ಕೊಂಡು ಇರುತ್ತಿದ್ದರು.
https://www.instagram.com/p/CAk6dcIjUoT/
ಇಂತಹ ಅನೇಕ ವಿಚಾರಗಳು ಗೊತ್ತಿದ್ರೂ ಕೂಡ ಇದೀಗ ಲಾಕ್ ಡೌನ್ ಟೈಮ್ ನಲ್ಲಿ ಯುವಿ ಕೆಲವೊಂದು ಸ್ವಾರಸ್ಯಕರವಾದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಇತ್ತೀಚೆಗೆ ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಅವರಿಗೆ ಕೀಪ್ ಇಟ್ ಅಪ್ ಚಾಲೆಂಜ್ ಹಾಕಿದ್ದರು. ಯುವಿಯ ಚಾಲೆಂಜ್ ಸ್ವೀಕರಿಸಿದ್ದ ಸಚಿನ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚೆಂಡು ಮತ್ತು ಬ್ಯಾಟ್‍ನೊಂದಿಗೆ ಸರಸವಾಡುತ್ತಿದ್ದರು. ಈ ಸವಾಲಿನಲ್ಲಿ ಸೋತ ಯುವಿ ಸಚಿನ್‍ಗೆ ಯಾಕೆ ಸವಾಲು ಹಾಕಲು ಹೋದೆ ಎಂಬುದನ್ನು ನೆನಪಿಸುವಂತಿತ್ತು.
ಇದೀಗ ಯುವರಾಜ್ ಸಿಂಗ್ ಮತ್ತೆ ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿಯಾಗಿದ್ದಾರೆ. ಹಳೆಯ ದಿನಗಳನ್ನು ನೆನಪಿಸಿರುವ ಫೋಟೋವೊಂದನ್ನು ಯುವಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ. ಆಶೀಶ್ ನೆಹ್ವಾ, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಹಾಗೂ ಯುವರಾಜ್ ಕಾಯಿನ್ ಬೂತ್ ನಲ್ಲಿ ಫೋನ್ ಮಾಡುತ್ತಿರುವ ಫೋಟೋ ಸಾಕಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ. ಅಲ್ಲದೆ ಟ್ಯಾಗ್ ಲೈನ್ ನಲ್ಲಿ ಕೆಟ್ಟ ಪ್ರದರ್ಶನ ನೀಡಿದ ನಂತರ ಹೆತ್ತವರು ಮೊಬೈಲ್ ಬಿಲ್ ಅನ್ನು ಪಾವತಿಸಿಲ್ಲ ಎಂದು ಹಾಕೊಂಡಿದ್ದಾರೆ. ಈ ಮೂಲಕ ನೆಹ್ವಾ, ಲಕ್ಷ್ಮಣ್ ಹಾಗೂ ಸೆಹ್ವಾಗ್‍ಗೆ ಹಳೆಯ ದಿನಗಳನ್ನು ನೆನಪಿಸಿದ್ದಾರೆ ಯುವರಾಜ್.








