Petrol – diesel ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ ಗೆ 80 ಪೈಸೆ ಹೆಚ್ಚಳ
ನಾಲ್ಕೂವರೆ ತಿಂಗಳ ಬಳಿಕ ತೈಲ ಬೆಲೆ ಏರಿಕೆ
ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ ಗೆ 80 ಪೈಸೆ ಹೆಚ್ಚಳ
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 96.21 ರೂ
ಪಂಚರಾಜ್ಯಗಳ ಚುನಾವಣೆ ಬಳಿಕ ಬೆಲೆ ಏರಿಕೆ
ಬೆಂಗಳೂರು : ದೇಶದಲ್ಲಿ ಬೆಲೆ ಏರಿಕೆ ಕಾಟ ಮತ್ತೆ ಮುಂದುವರೆದಿದೆ. ದಿನಬಳಕೆ ವಸ್ತುಗಳ ದರ ಹೆಚ್ಚಳದ ಬೆನ್ನಲ್ಲೆ ಇದೀಗ ತೈಲ ಕಂಪನಿಗಳು ವಾಹನ ಸವಾರರಿಗೆ ಬಿಗ್ ಶಾಕ್ ನೀಡಿವೆ.
ಇಂದು ತೈಲ ಕಂಪನಿಗಳು ಬೆಲೆ ಪರಿಷ್ಕರಣೆ ಮಾಡಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ ಗೆ 80 ಪೈಸೆ ಹೆಚ್ಚಳ ಮಾಡಲಾಗಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದ ಮತ್ತು ಪಂಚರಾಜ್ಯಗಳ ಚುನಾವಣೆ ಬಳಿಕ ಬೆಲೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು.
ಅದರಂತೆ ಇದೀಗ ಪೆಟ್ರೋಲ್, ಡೀಸೆಲ್ ಬೆಲೆಯ ಜೊತೆಗೆ ಮನೆ ಬಳಕೆಯ ಅಡುಗೆ ಅನಿಲ ದರ ಕೂಡ ಹೆಚ್ಚಳ ಮಾಡಲಾಗಿದೆ.
ಇದರೊಂದಿಗೆ ದೇಶದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದಂತೆ ಆಗಿದೆ.
ಇಂದು ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ ಗೆ 80 ಪೈಸೆ ಹೆಚ್ಚಳ ಮಾಡಲಾಗಿದೆ.
ಅದರಂತೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 96.21 ರೂಪಾಯಿ, ಡೀಸೆಲ್ ಲೀಟರ್ಗೆ 87.47 ರೂಪಾಯಿ,
ಚೆನ್ನೈನಲ್ಲಿ ಪೆಟ್ರೋಲ್ ಲೀಟರ್ಗೆ 102.16 ರೂಪಾಯಿ, ಡೀಸೆಲ್ ಲೀಟರ್ಗೆ 92.19 ರೂಪಾಯಿ,
ಮುಂಬೈನಲ್ಲಿ ಲೀಟರ್ಗೆ ಪೆಟ್ರೋಲ್ ಬೆಲೆ 110.82 ರೂಪಾಯಿ ಲೀಟರ್ ಡೀಸೆಲ್ ಬೆಲೆ 95.00 ರೂಪಾಯಿ ಆಗಿದೆ. petrol and diesel price hike