ಚೀನಾ ವಿಮಾನ ಪತನ: ಭಾರತದ ಬೋಯಿಂಗ್ 737 ಫ್ಲೈಟ್ ಗಳ ಮೇಲೆ ಕಣ್ಗಾವಲು
132 ಮಂದಿ ಪ್ರಯಾಣಿಸುತ್ತಿದ್ದ ಚೀನಾ ಈಸ್ಟರ್ನ್ ಏರ್‌ಲೈನ್ಸ್ ವಿಮಾನ ಸೋಮವಾರ ಪತನಗೊಂಡ ನಂತರ ಭಾರತದ DGCA ಭಾರತೀಯ ಬೋಯಿಂಗ್ 737 ಫ್ಲೈಟ್ಗಳ ಮೇಲೆ ಕಣ್ಗಾವರಿಸಿದೆ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ಹೇಳಿದ್ದಾರೆ. ಸ್ಪೈಸ್‌ಜೆಟ್, ವಿಸ್ತಾರಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳು ಬೋಯಿಂಗ್ 737 ವಿಮಾನಗಳನ್ನು ಹೊಂದಿವೆ.
ಸೋಮವಾರದ ಅಪಘಾತದ ನಂತರ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಳಿದಾಗ, ಕುಮಾರ್ ಪಿಟಿಐಗೆ ಹೇಳಿದರು, “ವಿಮಾನ ಸುರಕ್ಷತೆಯು ಗಂಭೀರ ವ್ಯವಹಾರವಾಗಿದೆ ಮತ್ತು ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದೇವೆ. ನಾವು ನಮ್ಮ 737 ಪ್ಲೀಟ್ ಗಳ ಮೇಲೆ ವಿಶೇಷ ಕಣ್ಣಿಟ್ಟಿದ್ದೇವೆ ಎಂದು ಹೇಳಿದರು.
ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ತೆರಳುತ್ತಿದ್ದ ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನ ಬೋಯಿಂಗ್ 737-800 ವಿಮಾನವು ವುಝೌ ನಗರದ ಟೆಂಗ್‌ಕ್ಸಿಯಾನ್ ಕೌಂಟಿಯಲ್ಲಿ ಸಂಪರ್ಕ ಕಳೆದುಕೊಂಡು ಪತನಗೊಂಡಿದೆ.