ಸರಕಾರದ ಪರಿಹಾರ ಧನವನ್ನು ನಿರಾಕರಿಸಿದ ರಾಜ್ಯದ ಹಲವು ಕುಟುಂಬಗಳು
ಬೆಂಗಳೂರು: ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರಾಕಾರ ಪರಿಹಾರ ಧನವನ್ನು ನೀಡುತ್ತಿದ್ದು, ಇದನ್ನು ಕರ್ನಾಟಕದ 893 ಕುಟುಂಬಗಳು ನಿರಾಕರಿಸಿವೆ.
ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿದ್ದು, ಕೊರೊನಾದಿಂದ ಮೃತಪಟ್ಟವರಿಗೆ ಕೇಂದ್ರ ಸರಕಾರದಿಂದ 50 ಸಾವಿರ ರೂ ಮತ್ತು ಇದಕ್ಕೆ ರಾಜ್ಯ ಸರಕಾರ ಹೆಚ್ಚವರಿಯಾಗಿ 1 ಲಕ್ಷ ರೂ ಸೇರಿಸಿ 1.5 ಲಕ್ಷ ರೂ ಪರಿಹಾರ ನೀಡುತ್ತಿದೆ. ಆದರೆ ಇದನ್ನು ರಾಜ್ಯದ 893 ಕುಟುಂಬಗಳು ನಿರಾಕರಿಸಿ, ಬಡವರಿಗೆ ದಾನ ಮಾಡಿ ಎಂದು ಹೇಳಿವೆ.
ಯಾವ ಜಿಲ್ಲೆಯಲ್ಲಿ ಎಷ್ಟು ಕುಟುಂಬ ನಿರಾಕರಣೆ?
ಬಿಬಿಎಮ್ಪಿ ವ್ಯಾಪ್ತಿಯಲ್ಲಿ 481, ಬೆಂಗಳೂರು ನಗರ 40, ಕೋಲಾರ 55, ಮೈಸೂರು 29, ಹಾಸನ 26, ದಕ್ಷಿಣ ಕನ್ನಡ 24, ಕಲಬುರಗಿ 23, ಕೊಪ್ಪಳ 17 ಮಂಡ್ಯ 17 ಶಿವಮೊಗ್ಗ 16, ಉತ್ತರಕನ್ನಡ 14, ಬಳ್ಳಾರಿ 13, ಚಿಕ್ಕಮಗಳೂರು 12, ಚಾಮರಾಜನಗರ 11, ಬಾಗಲಕೋಟೆ 9, ಉಡುಪಿ 9, ಬೆಳಗಾವಿ 9, ಚಿಕ್ಕಬಳ್ಳಾಪುರ ಮತ್ತು ವಿಜಯಪುರ ತಲಾ 8, ಬೀದರ ಮತ್ತು ತುಮಕೂರು ತಲಾ 7, ಹಾವೇರಿ 6, ಬೆಂಗಳೂರು ಗ್ರಾಮಾಂತರ ಗದಗ ಹಾಗೂ ರಾಯಚೂರು ತಲಾ 5, ಚಿತ್ರದುರ್ಗ 3, ದಾವಣಗೆರೆ 2, ಯಾದಗಿರಿ 1
ರಾಜಧಾನಿ ಬೆಂಗಳೂರು ಒಂದರಲ್ಲೇ 521 ಕುಟುಂಬಗಳು ಕೋವಿಡ್ ಪರಿಹಾರ ಧನವನ್ನು ನಿರಾಕರಿಸಿವೆ. ಕೊರೊನಾದಿಂದ ರಾಜಧಾನಿಯಲ್ಲಿ ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು.