ADVERTISEMENT
Thursday, March 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

KKR v CSK : ಮೊದಲ ಪಂದ್ಯದಲ್ಲಿ ಸಿಎಸ್ ಕೆ ಸೋಲಿಗೆ ಕಾರಣವೇನು..?

Mahesh M Dhandu by Mahesh M Dhandu
March 27, 2022
in Newsbeat, Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

KKR v CSK : ಮೊದಲ ಪಂದ್ಯದಲ್ಲಿ ಸಿಎಸ್ ಕೆ ಸೋಲಿಗೆ ಕಾರಣವೇನು..?

ಮೊದಲು  ಸಿಎಸ್ ಕೆ ಬ್ಯಾಟರ್ ಗಳ ಪರದಾಟ… ನಂತರ ಧೋನಿ ಧಮಾಖ.. ನಿರಾಯಾಸವಾಗಿ ಗೆದ್ದ ಕೆಕೆಆರ್ ಇದು ಇಂಡಿಯಲ್ ಪ್ರಿಮಿಯರ್ ಲೀಗ್ ನ ಮೊದಲ ಪಂದ್ಯದ ಹೈಲೇಟ್ಸ್..

Related posts

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

March 5, 2026
ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

March 5, 2026

15 ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀನಾಯವಾಗಿ ಸೋಲುಂಡಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸುಲಭ ಜಯ ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಆರಂಭದಿಂದಲೇ ವಿಕೆಟ್ ಗಳನ್ನ ಕಳೆದುಕೊಳ್ಳುತ್ತಾ ಸಾಗಿತು.

ರಾಬಿನ್ ಉತ್ತಪ್ಪ, ರವೀಂದ್ರ ಜಡೇಜಾ, ಎಂ.ಎಸ್.ಧೋನಿ ಬಿಟ್ಟರೇ ಬೇರೆ ಯಾರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ  ನಿಲ್ಲಲಿಲ್ಲ.  

ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್(0) ಹಾಗೂ ಡ್ವೇನ್ ಕಾನ್ವೇ(3) ಗೆ ಪೆವಿಲಿಯನ್ ಸೇರಿಕೊಂಡರು.

ipl 2022 kkr vs csk match report  saaksha tv

ಬಳಿಕ ಬಂದ ರಾಬಿನ್ ಉತ್ತಪ್ಪ, ಬೌಂಡರಿ, ಸಿಕ್ಸ್ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದ್ರೂ 28 ರನ್ ಗಳಿಗೆ ಆಟ ಮುಗಿಸಿದ್ರು. ಇವರ ಬೆನ್ನಲ್ಲೇ ಅಂಬಾಟಿ ರಾಯುಡು 15 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು.

61 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈ ತಂಡಕ್ಕೆ ರವೀಂದ್ರ ಜಡೇಜಾ ಮತ್ತು ಧೋನಿ ಆಸರೆಯಾದರು. ಮುಖ್ಯವಾಗಿ ಎಂ.ಎಸ್.ಧೋನಿ ಅರ್ಧಶತಕ ಸಿಡಿಸಿ ಮಿಂಚಿದರು.

 ಹಳೆಯ ಖದರ್ನಲ್ಲಿ ಬ್ಯಾಟ್ ಬೀಸಿದ ಧೋನಿ ಅಜೇಯ 50 ರನ್ (38 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿದರು. ಇವರಿಗೆ ಜಡೇಜಾ ಅಜೇಯ 26 ರನ್ ಉತ್ತಮ ಸಾಥ್ ನೀಡಿದರು.

ಅಂತಿಮವಾಗಿ ಚೆನ್ನೈ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತು.

132 ರನ್ಗಳ ಟಾರ್ಗೆಟ್ ಬೆನ್ನತ್ತಿದ ಕೆಕೆಆರ್ 18.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 133 ರನ್ ಸಿಡಿಸಿ ಗೆದ್ದು ಬೀಗಿತು.  ಕೆಕೆಆರ್ ಪರ ಆರಂಭಿಕರಾದ ವೆಂಕಟೇಶ್ ಅಯ್ಯರ್ 16 ರನ್ (16 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು.

ಬಳಿಕ ನಿತೇಶ್ ರಾಣಾ 21 ರನ್ (17 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡಕ್ಕೆ ನೆರವಾದರು. ಇನ್ನೊಂದೆಡೆ ಅರ್ಧಶತಕದ ಹೊಸ್ತಿಲಲ್ಲಿದ್ದ ರಹಾನೆ 44 ರನ್ (34 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು.

ಅಂತಿಮವಾಗಿ ಸ್ಯಾಮ್ ಬಿಲ್ಲಿಂಗ್ಸ್ 25 ರನ್ (21 ಎಸೆತ, 1 ಸಿಕ್ಸ್, 1 ಬೌಂಡರಿ) ಮತ್ತು ನಾಯಕ ಶ್ರೇಯಸ್ ಅಯ್ಯರ್ ಅಜೇಯ 20 ರನ್ (20 ಎಸೆತ, 1 ಬೌಂಡರಿ) ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.  

Tags: #Saaksha TVcskIPLkkr
ShareTweetSendShare
Join us on:

Related Posts

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

by Shwetha
March 5, 2026
0

ಬೆಂಗಳೂರಿನ ಎಮ್. ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದೆ. ಸ್ಟೇಡಿಯಂ...

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

by Shwetha
March 5, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆಗಳು ಆರಂಭವಾಗಲಿವೆ...

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

by Shwetha
March 5, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಅಕ್ರಮವಾಗಿ ಲಗ್ಗೆ ಇಟ್ಟಿದ್ದ ನಕಲಿ ಫಲಾನುಭವಿಗಳಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಭಾರಿ ಆಘಾತ ನೀಡಿದೆ. ಅರ್ಹತೆ ಇಲ್ಲದಿದ್ದರೂ...

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

by Shwetha
March 5, 2026
0

ಕರ್ನಾಟಕದ ರಾಜಕೀಯ ಅಂಗಳದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ದಿನಗಳು ಉರುಳುತ್ತಿದ್ದಂತೆ, ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಶೀತಲ ಸಮರ ಇದೀಗ ತಾರಕಕ್ಕೇರಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ...

ಬಜೆಟ್ 2026 ರಾಜ್ಯದ ಅಭಿವೃದ್ಧಿಗೆ 13 ಸೂತ್ರಗಳು ಘೋಷಣೆಯಾಗಲಿದೆಯೇ ಈ ಜನಪ್ರಿಯ ಯೋಜನೆಗಳು

17ನೇ ಬಜೆಟ್‌ಗೆ ಸಿದ್ದರಾಮಯ್ಯ ಸಜ್ಜು: ಈ ಬಾರಿ 10-15% ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆ

by Shwetha
March 5, 2026
0

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು 17ನೇ ಬಾರಿ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಇಂದು ಸಂಜೆ ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram