ಪ್ರಸಕ್ತ ಹಣಕಾಸು ವರ್ಷ 8000 ಕೋಟಿಗೂ ಹೆಚ್ಚು ಡಿಜಿಟಲ್ ವಹಿವಾಟು
ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದಲ್ಲಿ ಎಂಟು ಸಾವಿರ ಕೋಟಿಗೂ ಹೆಚ್ಚು ಡಿಜಿಟಲ್ ಪಾವತಿ ವಹಿವಾಟು ನಡೆದಿದೆ ಎಂದು ಸರ್ಕಾರ ಹೇಳಿದೆ. ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ವಿಷಯ ತಿಳಿಸಿದ್ದಾರೆ.
ವರ್ಷಗಳಲ್ಲಿ, ಡಿಜಿಟಲ್ ಪಾವತಿ ವಹಿವಾಟುಗಳು 2017-18 ರಲ್ಲಿ ಎರಡು ಸಾವಿರ ಕೋಟಿಯಿಂದ 2020-21 ರಲ್ಲಿ ಐದು ಸಾವಿರ ಕೋಟಿಗೆ ಬಹುಪಟ್ಟು ಬೆಳೆದಿದೆ ಎಂದು ಅವರು ಹೇಳಿದರು.
ಚಂದ್ರಶೇಖರ್ ಮಾತನಾಡಿ, BHIM-UPI ನಾಗರಿಕರ ಆದ್ಯತೆಯ ಪಾವತಿ ವಿಧಾನವಾಗಿ ಹೊರಹೊಮ್ಮಿದೆ ಮತ್ತು ಈ ವರ್ಷದ ಫೆಬ್ರವರಿವರೆಗೆ ಎಂಟು ಲಕ್ಷದ 27 ಸಾವಿರ ಕೋಟಿ ರೂಪಾಯಿಗಳ ಮೌಲ್ಯದೊಂದಿಗೆ 452 ಕೋಟಿ ಡಿಜಿಟಲ್ ಪಾವತಿ ವ್ಯವಹಾರಗಳ ದಾಖಲೆಯನ್ನು ಸಾಧಿಸಿದೆ.
Over 8000 cr digital payment transactions reported during current financial year: