ADVERTISEMENT
Thursday, March 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

RCB – Chahal | ಚಹಾಲ್ ಗೆ ಆರ್ ಸಿಬಿ ಅನ್ಯಾಯ…!!!

Mahesh M Dhandu by Mahesh M Dhandu
March 29, 2022
in Newsbeat, Sports, ಕ್ರಿಕೆಟ್, ಕ್ರೀಡೆ
Yuzvendra Chahal rcb ipl 2021 t-20 cricket saakshatv
Share on FacebookShare on TwitterShare on WhatsappShare on Telegram

RCB – Chahal | ಚಹಾಲ್ ಗೆ ಆರ್ ಸಿಬಿ ಅನ್ಯಾಯ…!!!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 8 ಸೀಸನ್‌ಗಳಲ್ಲಿ ಆಡಿದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್, ಆರ್ ಸಿಬಿಯ ಅವಿಭಾಜ್ಯ ಭಾಗವಾಗಿದ್ದರು.

Related posts

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

March 5, 2026
ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

March 5, 2026

2014ರ ಐಪಿಎಲ್ ನಲ್ಲಿ ರೆಡ್ ಅಂಡ್ ಗೋಲ್ಡ್ ಕ್ಯಾಂಪ್ ಸೇರಿಕೊಂಡ ಚಹಾಲ್, 2021 ಐಪಿಎಲ್ ವರೆಗೆ ಆರ್​ಸಿಬಿ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿದ್ರು.

ಜೊತೆಗೆ ಟೀಮ್ ಇಂಡಿಯಾಗೂ ಎಂಟ್ರಿಕೊಟ್ಟರು.  ಆರ್ ಸಿಬಿ ಪರ ಆಡುತ್ತಾ ಎದುರಾಳಿಗಳನ್ನು ಗಿರಗಿಟ್ಟಲೇ ಹೊಡೆಸುತ್ತಿದ್ದ ಚಹಾಲ್ ಅದೇಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ.  

ಸತತ ಎಂಟು ಸೀಸನ್ ಗಳಲ್ಲಿ ಆರ್ ಸಿಬಿ ಜರ್ಸಿಯಲ್ಲಿ ಮಿಂಚಿದ್ದ ಚಹಾಲ್  ಐಪಿಎಲ್‍ನಲ್ಲಿ ಒಟ್ಟು 113 ಪಂದ್ಯಗಳಿಂದ 139 ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಗುರುತಿಸಿಕೊಂಡಿದ್ದರು.

yuzvendra-chahal-sensational-comments-on-rcb saakshatv

ಜೊತೆಗೆ ಕೊಹ್ಲಿಯ ನಂಬಿಕೆಯ ಬೌಲರ್ ಆಗಿದ್ದರು.  ಜೊತೆಗೆ ಆರ್ ಸಿಬಿ ಅಭಿಮಾನಿಗಳು ಕೂಡ ಚಹಾಲ್ ಗೆ ವಿಶೇಷ ಸ್ಥಾನವನ್ನ ನೀಡಿದ್ದರು.

ಆದ್ರೆ  ಅಚ್ಚರಿ ಎಂಬಂತೆ ಆರ್​ಸಿಬಿ ಫ್ರಾಂಚೈಸಿ 2022ರ ಐಪಿಎಲ್ ಗಾಗಿ ಚಹಾಲ್ ಅವರನ್ನ ದಿಢೀರ್ ಆಗಿ ಕೈಬಿಟ್ಟಿತು.

ಮೆಗಾ ಹರಾಜು ಹಿನ್ನೆಲೆಯಲ್ಲಿ ಆರ್ ಸಿಬಿ ಫ್ರಾಂಚೈಸಿ ರಿಟೇನ್ ಆಟಗಾರರ ಪಟ್ಟಿಯನ್ನ ರಿಲೀಸ್ ಮಾಡಿದಾಗ ಆರ್ ಸಿಬಿ ಅಭಿಮಾನಿಗಳಿಗೆ ಶಾಕ್ ಕಾದಿತ್ತು.

ಯಾಕಂದರೆ ರಿಟೈನ್ ಆಟಗಾರರ ಪಟ್ಟಿಯಲ್ಲಿ ಚಹಾಲ್ ಹೆಸರು ಮಿಸ್ ಆಗಿತ್ತು. ಇದು ಅಭಿಮಾನಿಗಳ ಜೊತೆಗೆ ಸ್ವತಃ ಚಹಾಲ್ ಅವರಿಗೂ ನೋವುಂಟು ಮಾಡಿದೆ.

ಇದೀಗ ಇದೇ ವಿಚಾರದ ಬಗ್ಗೆ ಚಹಾಲ್ ಮಾತನಾಡಿದ್ದು, ಆರ್ ಸಿಬಿ ಫ್ರಾಂಚೈಸಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಚಹಾಲ್ ಹೇಳಿಕೊಂಡಿರುವಂತೆ, ಆರ್ ಸಿಬಿಗೆ ಅವರು ತುಂಬಾ ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದರು.

ಚಹಾಲ್ ಅವರಿಗೆ ಆರ್​ಸಿಬಿ ಕೇವಲ ಒಂದು ತಂಡವಾಗಿ ಇರಲಿಲ್ಲ. ಬೆಂಗಳೂರು ಅಭಿಮಾನಿಗಳ ಪ್ರೋತ್ಸಾಹ, ಸತತವಾಗಿ ಪಂದ್ಯವನ್ನು ಸೋತರು ಕೈಬಿಡದ ಫ್ಯಾನ್ಸ್ ನಿಯತ್ತಿಗೆ ಮನಸೋತಿದ್ದರು.  

ಅಂದಹಾಗೆ ಚಹಾಲ್ ಬೇರೆ ತಂಡ ಸೇರಿಕೊಂಡ ಮೇಲೆ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಆರ್ ಸಿಬಿ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ. ನೀವು ಯಾಕೆ ಹೆಚ್ಚು ಹಣವನ್ನ ಕೇಳಿದ್ರೀ…? ಆರ್ ಸಿಬಿ ನಿಮಗೆ ಬೇಡವಾಗಿತ್ತಾ ಎಂಬಂತೆ ಆರ್ ಸಿಬಿಯನ್ಸ್ ಪ್ರಶ್ನಿಸಿದ್ದಾರೆ.

ಇದೀಗ ಈ ಪ್ರಶ್ನೆಗಳಿಗೆ ಉತ್ತರಿಸಿರುವ ಚಹಾಲ್, ನಾನು ಐಪಿಎಲ್ ನಲ್ಲಿ ಆರ್ ಸಿಬಿ ಬಿಟ್ಟು ಬೇರೆ ತಂಡದ ಪರವಾಗಿ ಆಡುತ್ತೇನೆ ಅಂತಾ ಅಂದುಕೊಂಡಿರಲಿಲ್ಲ.

ಹಣವೇ ಮುಖ್ಯವಾಯಿತೇ ಎಂದು ಆರ್‌ಸಿಬಿ ಫ್ಯಾನ್ಸ್ ಈಗಲೂ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಆರ್‌ಸಿಬಿ ತಂಡದಿಂದ ನನ್ನ ಜೀವನ ಸಾಕಷ್ಟು ಬದಲಾಗಿದೆ.

ತಂಡದ ಅಭಿಮಾನಿಗಳೂ ಸಾಕಷ್ಟು ಪ್ರೀತಿ ನೀಡಿದ್ದರು. ನಾನು ಅಭಿಮಾನಿಗಳಿಗೆ ಎಂದಿಗೂ ನಿಯತ್ತಾಗಿದ್ದೆ.

yuzvendra-chahal-sensational-comments-on-rcb saakshatv

ಆದ್ರೆ  ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ತಂಡ ನನ್ನ ಬಳಿಕ ರಿಟೇನ್ ಆಗುವಿರಾ ಎಂದೂ ಕೇಳಲಿಲ್ಲ. ಬದಲಿಗೆ ಕೊಹ್ಲಿ, ಮ್ಯಾಕ್ಸಿ, ಸಿರಾಜ್ ಅವರನ್ನ ಉಳಿಸಿಕೊಂಡಿದ್ದೇವೆ ಅಂತಾ ಮಾತ್ರ ಹೇಳಿದ್ರು.

ಇದರ ಬದಲಿಗೆ ನೀವು ತಂಡದಲ್ಲಿ ಇರ್ತೀರಾ ಅಂತಾ ಕೇಳಿದ್ದರೆ ನಾನು ಕಣ್ಣುಮುಚ್ಚಿ ಇರಲು ಒಪ್ಪುತ್ತಿದ್ದೆ. ನನಗೆ ಹಣಕ್ಕಿಂತ ತಂಡದ ಜತೆಗಿನ ಬಾಂಧವ್ಯವೇ ಮುಖ್ಯವಾಗಿತ್ತು.

ಆದರೆ ನನ್ನನ್ನು ರಿಟೇನ್ ಮಾಡಿಕೊಳ್ಳದೆ, ಹರಾಜಿನಲ್ಲಿ ಮರಳಿ ಖರೀದಿಸುವೆವು ಎಂದು ತಿಳಿಸಿದ್ದರು. ಆದ್ರೆ ಅದು ಆಗಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಅಂದಹಾಗೆ  ಚಹಾಲ್​ 2014ರಲ್ಲಿ ಮೂಲಬೆಲೆ 10 ಲಕ್ಷ ರೂ. ಗಳಿಗೆ ಆರ್​ಸಿಬಿ ಸೇರಿದ್ದರು. ನಂತರ ಅದೇ ಮೊತ್ತಕ್ಕೆ 2017ರವರೆಗೂ ಆಡಿದ್ದ ಸ್ಪಿನ್ನರ್​ 2018 ರಲ್ಲಿ 6 ಕೋಟಿ ರೂ. ಪಡೆದಿದ್ದರು.

ಇದೀಗ  ರಾಜಸ್ಥಾನ್ ರಾಯಲ್ಸ್ ತಂಡ ಹರಾಜಿನಲ್ಲಿ ಚಹಾಲ್ ಗೆ 6.50 ಕೋಟಿ ರೂ.ಗೆ​ ಖರೀದಿಸಿದೆ. ಈ ಮೂಲಕ 8 ವರ್ಷಗಳ ಆರ್​ಸಿಬಿಯೊಂದಗಿನ ಒಡನಾಟ 2022ಕ್ಕೆ ಅಂತ್ಯಗೊಂಡಿದೆ.

Tags: #Saaksha TVCricketRCBYajuvendra Chahal
ShareTweetSendShare
Join us on:

Related Posts

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

by Shwetha
March 5, 2026
0

ಬೆಂಗಳೂರಿನ ಎಮ್. ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದೆ. ಸ್ಟೇಡಿಯಂ...

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

by Shwetha
March 5, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆಗಳು ಆರಂಭವಾಗಲಿವೆ...

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

by Shwetha
March 5, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಅಕ್ರಮವಾಗಿ ಲಗ್ಗೆ ಇಟ್ಟಿದ್ದ ನಕಲಿ ಫಲಾನುಭವಿಗಳಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಭಾರಿ ಆಘಾತ ನೀಡಿದೆ. ಅರ್ಹತೆ ಇಲ್ಲದಿದ್ದರೂ...

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

by Shwetha
March 5, 2026
0

ಕರ್ನಾಟಕದ ರಾಜಕೀಯ ಅಂಗಳದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ದಿನಗಳು ಉರುಳುತ್ತಿದ್ದಂತೆ, ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಶೀತಲ ಸಮರ ಇದೀಗ ತಾರಕಕ್ಕೇರಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ...

ಬಜೆಟ್ 2026 ರಾಜ್ಯದ ಅಭಿವೃದ್ಧಿಗೆ 13 ಸೂತ್ರಗಳು ಘೋಷಣೆಯಾಗಲಿದೆಯೇ ಈ ಜನಪ್ರಿಯ ಯೋಜನೆಗಳು

17ನೇ ಬಜೆಟ್‌ಗೆ ಸಿದ್ದರಾಮಯ್ಯ ಸಜ್ಜು: ಈ ಬಾರಿ 10-15% ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆ

by Shwetha
March 5, 2026
0

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು 17ನೇ ಬಾರಿ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಇಂದು ಸಂಜೆ ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram