ಪ್ರಸಿದ್ಧ ಗಣ ಮೇಳದಲ್ಲಿ ಭಾಗಿಯಾಗಿರುವ ಲಕ್ಷಾಂತರ ಭಕ್ತಾಧಿಗಳು ಹಾಗೂ ಮಠಾಧೀಶರ ಬೃಹತ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಸಿದ್ದಗಂಗಾ ಸ್ವಾಮೀಜಿ, ನಮ್ಮ ಶ್ರೀಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬಸವ ತತ್ವವನ್ನು ಪ್ರಚಾರ ಮಾಡಲು ಶ್ರಮಿಸುತ್ತಿದ್ದಾರೆ. ನಂತರ ಬಸವ ತತ್ವಗಳ ಬಗ್ಗೆ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿಗಳು, ಮನುಷ್ಯ ಮನುಷ್ಯನಾಗಿ ಬದುಕ ಕಲೆಯನ್ನು ಕಲಿಸಿಕೊಟ್ಟವರು ವಚನಕಾರ ಬಸವಣ್ಣ ಅವರ ಬೆಳಕಿನಲ್ಲಿ ನಡೆದರೆ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇನ್ನು ಈ ಪ್ರಮಥರ ಗಣಮೇಳ ಎಲ್ಲರಿಗೂ ಮಾದರಿಯಾಗ ಬೇಕು. ಎಲ್ಲಾ ಮಠ ಮಾನ್ಯಗಳು ಸಂಪೂರ್ಣವಾಗಿ ಬಸವ ತತ್ವಗಳಿಂದ ನಡೆಯಬೇಕು ಆಗ ಮಾತ್ರ ರಾಜ್ಯದಲ್ಲಿ ಶಾಂತಿ ನೆಲೆಯಲು ಸಾಧ್ಯ ಎಂದರು. ಅಂದು ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ನಡೆದ ಗಣ ಮೇಳದ ನಂತರ, ಇಂದು ರಾಜಧಾನಿ ಬೆಂಗಳೂರಿನಲ್ಲಿ ಮುರುಘಾ ಶರಣರ ನೇತೃತ್ವದಲ್ಲಿ ಮತ್ತೆ ಗಣ ಮೇಳ ಶಾಶ್ವತ ಸಂಭ್ರಮಾಚರಣೆಗೆ ಪಾತ್ರವಾಗಲಿದೆ ಎಂದು ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲದೆ ಗಣ ಮೇಳದ ಇತಿಹಾಸವನ್ನು ಮೆಲುಕು ಹಾಕಿದ ಸ್ವಾಮೀಜಿಗಳು ಅಂದು ಬಿಜ್ಜಳರ ಆಡಳಿತವಿದ್ದಾಗ ಬಸವಣ್ಣ ಗಣ ಮೇಳ ನಡೆಸಿದ್ದರು. ಇಂದು ಯಡಿಯೂರಪ್ಪನವರ ಅಡಳಿತದಲ್ಲಿ ಗಣ ಮೇಳ ನಡೆಯುತ್ತಿದೆ ಇದು ಕನ್ನಡ ನಾಡಿನ ಹೆಮ್ಮೆಯ ವಿಷಯ ಎಂದೆಲ್ಲಾ ಬಣ್ಣಿಸಿದರು.
ಕಾಂಗ್ರೆಸ್‌ನಲ್ಲಿ ಬಜೆಟ್ ಅಸಮಾಧಾನ ಸ್ಫೋಟ.. ಪಕ್ಷಕ್ಕೆ ಡ್ಯಾಮೇಜ್?
ಕರ್ನಾಟಕ ರಾಜ್ಯ ಬಜೆಟ್ ಕುರಿತು ಸ್ವಪಕ್ಷ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿರುವುದು ಆಡಳಿತ ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ರಾಮನಗರ MLA ಇಕ್ಸಾಲ್ ಹುಸೇನ್ ಅವರು ತಮ್ಮ ಕ್ಷೇತ್ರಕ್ಕೆ ನಿರೀಕ್ಷಿಸಿದ್ದಷ್ಟು...








