Ayush Badoni | ಯಾರು ಈ ಆಯುಷ್ ಬದೋನಿ…?
ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟ್ಸ್ಮನ್ ಆಯುಷ್ ಬದೋನಿ ಐಪಿಎಲ್ನ ಮೊದಲ ಪಂದ್ಯದಲ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ.
ಐಪಿಎಲ್-2022ರ ಅಂಗವಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಬದೋನಿ ಅರ್ಧಶತಕದೊಂದಿಗೆ ಮಿಂಚಿದ್ದಾರೆ.
ಪಂದ್ಯದಲ್ಲಿ 41 ಎಸೆತಗಳಲ್ಲಿ 54 ರನ್ ಗಳಿಸಿದ್ದ ಬಧೋನಿ ಲಕ್ನೋ ತಂಡ ಉತ್ತಮ ಸ್ಕೋರ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅವರ ಇನ್ನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ಗಳು ಸೇರಿವೆ.
29 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಲಖನೌ ತಂಡವನ್ನು ದೀಪಕ್ ಹೂಡಾ ಜೊತೆಗೂಡಿ ಬದೋನಿ ಮೇಲೆ ಎತ್ತಿ ಹಿಡಿದರು.
ವಿಶ್ವ ಟಿ20 ಕ್ರಿಕೆಟ್ ನ ನಂ.1 ಬೌಲರ್ ರಶೀದ್ ಖಾನ್ ಅವರ ಬೌಲಿಂಗ್ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು.
ದೆಹಲಿಯ ಯುವ ಆಟಗಾರ 2018 ರ ಅಂಡರ್-19 ಏಷ್ಯಾ ಕಪ್ನಲ್ಲಿ ಭಾರತದ ಪರ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.
ಅದೇ ರೀತಿ ಶ್ರೀಲಂಕಾ ವಿರುದ್ಧದ ಯೂತ್ ಅಂಡರ್-19 ಟೆಸ್ಟ್ ನಲ್ಲಿ 202 ಎಸೆತಗಳಲ್ಲಿ 185 ರನ್ ಗಳಿಸಿದ್ದರು.
ಚೊಚ್ಚಲ ಪಂದ್ಯದಲ್ಲಿಯೇ ವಿಶ್ವದ ಶ್ರೇಷ್ಠ ಬೌಲರ್ ಗಳ ವಿರುದ್ಧ ಬ್ಯಾಟ್ ಬೀಸಿದ ಬದೋನಿ ರಾತ್ರೋ ರಾತ್ರಿ ಸ್ಟಾರ್ ಆಗಿದ್ದಾರೆ.
ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಯಾರು ಈ ಆಯುಷ್ ಬದೋನಿ ಎಂದು ನೆಟ್ಟಿಗರು ಸರ್ಚ್ ಮಾಡುತ್ತಿದ್ದಾರೆ.