ರಾಜ್ಯದಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡಡು ಅಭಿವೃದ್ಧಿ ಮಾಡಿದ್ದೇವೆ: ಸಿಎಂ
ಬೆಂಗಳೂರು: ರಾಜ್ಯದಲ್ಲಿ ಬುಗಿಲೆದ್ದ ಹಿಜಾಬ್, ಹಾಲಾಲ್ ವಿವಾದದ ನಡುವೆಯೂ ರಾಜ್ಯದಲ್ಲಿ ಶಾಂತತೆಯನ್ನು ಕಾಪಾಡಿಕೊಂಡು, ಅಭಿವೃದ್ಧಿಯ ಕಾರ್ಯಗಳನ್ನು ನಮ್ಮ ಸರಕಾರ ಮಾಡಿದೆ ಎಂದು ಮುಂಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಲ್ಲದೇ ಹಿಜಾಬ್, ಹಲಾಲ್ ವಿವಾಧದ ಸಂದಂರ್ಭದಲ್ಲೂ ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ. ಮತ್ತು ಮುಂದೆಯೂ ಕಾಪಾಡುತ್ತೇವೆ. ಇನ್ನೂ ರಾಜ್ಯದಲ್ಲಿ ಯುಗಾದಿ ಸಮಯದಲ್ಲಿ ಮಾಂಸ ಖರೀದಿಸುವ ವಿಚಾರವಾಗಿ ಹಲಾಲ್ ವಿರೋಧಿ ಅಭಿಯಾನ ನಡೆದಿದೆ.
ಇದಕ್ಕೆ ಎಲ್ಲ ಸಂಘಟನೆಗಳು ಹಲವಾರು ವಿಚಾರದಲ್ಲಿ ಬ್ಯಾನ್ ಮಾಡುತ್ತಲೇ ಇರುತ್ತವೆ. ಆದರೆ, ಇದಕ್ಕೆಲ್ಲ ಸರ್ಕಾರ ತನ್ನ ನಿಲುವನ್ನು ಹೇಳುತ್ತಾ ಇರಲು ಆಗಲ್ಲ. ಯಾವಾಗ ಏನು ಹೇಳಬೇಕೋ ಆಗ ಹೇಳಲಿದ್ದೇವೆ. ಯಾವಾಗ ನಿಲುವು ವ್ಯಕ್ತಪಡಿಸಬೇಕೋ ಆಗ ವ್ಯಕ್ತಪಡಿಸಲಿದ್ದೇವೆ ಎಂದರು.
ಅಲ್ಲದೇ ಸಾಹಿತಿಗಳು ಸಿಎಂ ಗೆ ಪತ್ರ ವಿಚಾರವಾಗಿ ಮಾತನಾಡಿ ಅದರಲ್ಲಿನ ಅಂಶ ಅಧ್ಯಯನ ಮಾಡಿ ಅವರು ಹೇಳಿರುವುದನ್ನು ಪರಿಗಣಿಸುತ್ತೇವೆ. ಅಲ್ಲದೇ, ವಾಸ್ತವಾಂಶ ಏನಿದೆ ಅಂತ ಪರಿಶೀಲಿಸುತ್ತೇವೆ. ಅದರ ಆಧಾರದಲ್ಲಿ ಬರುವ ದಿನಗಳಲ್ಲಿ ಯಾವ ರೀತಿ ಪರಿಸ್ಥಿತಿ ನಿಭಾಯಿಸಬೇಕೆಂದರು.
ಇದುವರೆಗೆ ಬಜೆಟ್ ಅನುಷ್ಠಾನ ಸೆಪ್ಟಂಬರ್ – ಅಕ್ಟೋಬರ್ ಆಗುತ್ತಿತ್ತು. ಇದರಿಂದ ಯೋಜನೆಗಳ ಅನುಷ್ಠಾನಕ್ಕೆ ವಿಳಂಬವಾಗುತ್ತಿತ್ತು. ಆದರೆ ಈಗ ಹಾಗಾಗಬಾರದು ಎಂದು ತಿಂಗಳಾಂತ್ಯದಲ್ಲಿ ಸಿದ್ದತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಏಪ್ರಿಲ್ ಮೊದಲ, ಎರಡನೇ ವಾರದಲ್ಲಿ ಹಣಕಾಸು ಇಲಾಖೆ ಒಪ್ಪಿಗೆ ಕೊಡಲಿದೆ ಎಂದು ತಿಳಿಸಿದರು.